ಮನೆ ಬಿಟ್ಟು ಹೋದ ಪತ್ನಿಯ ಚಿಂತೆಯಲ್ಲಿ ಆತ್ಮಹತ್ಯೆ
Update: 2022-05-09 21:06 IST
ಅಜೆಕಾರು : ಮನೆ ಬಿಟ್ಟು ಹೋದ ಪತ್ನಿಯ ಚಿಂತೆಯನ್ನು ವಿಪರೀತ ಮದ್ಯ ಸೇವನೆ ಚಟಕ್ಕೆ ಒಳಗಾದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇ 9ರಂದು ಬೆಳಗ್ಗೆ ನಡೆದಿದೆ.
ಮೃತರನ್ನು ಹೆಬ್ರಿ ಪಡುಕುಡೂರು ಗ್ರಾಮದ ನೆಕ್ಕರ್‌ಬೆಟ್ಟು ನಿವಾಸಿ ಆನಂದ ಶೆಟ್ಟಿ ಎಂಬವರ ಮಗ ಸುರೇಶ ಶೆಟ್ಟಿ(48) ಎಂದು ಗುರುತಿಸಲಾಗಿದೆ. ಸುರೇಶ್ ವಿಪರೀತ ಸಾರಾಯಿ ಕುಡಿಯುವ ಚಟ ಹೊಂದಿದ್ದು, ಇವರ ಜೊತೆ ಮನಸ್ತಾಪ ದಿಂದ ಪತ್ನಿ 2 ತಿಂಗಳ ಹಿಂದೆ ಮನೆ ಬಿಟ್ಟು ಹೋಗಿದ್ದರು. ಇದೇ ಚಿಂತೆಯಲ್ಲಿ ಜೀವನದಲ್ಲಿ ಜೀಗುಪ್ಸೆಗೊಂಡ ಅವರು ಮನೆಯ ಕೋಣೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.