ದಿಲ್ಲಿಯ ಅಕ್ಬರ್ ರಸ್ತೆ, ಹುಮಾಯೂನ್ ರಸ್ತೆ, ತುಘಲಕ್ ರಸ್ತೆ ಮರುನಾಮಕರಣ ಮಾಡಲು ಬಿಜೆಪಿ ಆಗ್ರಹ

Update: 2022-05-10 09:36 GMT
ಅಕ್ಬರ್ ರಸ್ತೆಯ ಮಾರ್ಗಸೂಚಿ ಫಲಕದಲ್ಲಿ ಅಂಟಿಸಲಾಗಿದ್ದ ಮಹಾರಾಣಾ ಪ್ರತಾಪ್ ಹೆಸರಿನ ಪೋಸ್ಟರ್ ತೆಗೆದ ಪೊಲೀಸರು. Photo: PTI

ಹೊಸದಿಲ್ಲಿ: ದಿಲ್ಲಿಯಲ್ಲಿರುವ  ತುಘಲಕ್ ರಸ್ತೆ, ಅಕ್ಬರ್ ರಸ್ತೆ, ಔರಂಗಝೇಬ್ ಲೇನ್, ಹುಮಾಯೂನ್ ರಸ್ತೆ ಹಾಗೂ  ಶಹಜಹಾನ್ ರಸ್ತೆಗಳನ್ನು ಮರುನಾಮಕರಣ ಮಾಡಬೇಕು ಎಂದು ದಿಲ್ಲಿ  ಬಿಜೆಪಿ ಅಧ್ಯಕ್ಷ  ಆದೇಶ್ ಗುಪ್ತಾ ನಗರ ಸಂಸ್ಥೆ ಎನ್‌ಡಿಎಂಸಿಗೆ ಪತ್ರ ಬರೆದಿದ್ದಾರೆ.

ತುಘಲಕ್ ರಸ್ತೆಗೆ ಗುರು ಗೋಬಿಂದ್ ಸಿಂಗ್ ಮಾರ್ಗ್, ಅಕ್ಬರ್ ರಸ್ತೆಗೆ ಮಹಾರಾಣಾ ಪ್ರತಾಪ್ ರಸ್ತೆ, ಔರಂಗಝೇಬ್ ಲೇನ್ ಗೆ  ಅಬ್ದುಲ್ ಕಲಾಂ ಲೇನ್, ಹುಮಾಯೂನ್ ರಸ್ತೆಗೆ ಮಹರ್ಷಿ ವಾಲ್ಮೀಕಿ ರಸ್ತೆ ಹಾಗೂ  ಶಹಜಹಾನ್ ರಸ್ತೆಗೆ ಜನರಲ್ ಬಿಪಿನ್ ರಾವತ್ ಹೆಸರನ್ನು ಮರುನಾಮಕರಣ ಮಾಡಬೇಕು ಎಂದು ಗುಪ್ತಾ ಸಲಹೆ ನೀಡಿದ್ದಾರೆ.

ಬಾಬರ್ ಲೇನ್‌ಗೆ ಸ್ವಾತಂತ್ರ್ಯ ಹೋರಾಟಗಾರ ಖುದಿರಾಮ್ ಬೋಸ್ ಹೆಸರನ್ನು ಮರುನಾಮಕರಣ ಮಾಡಬೇಕು ಎಂದು ದಿಲ್ಲಿ ಬಿಜೆಪಿ ಅಧ್ಯಕ್ಷ  ಹೇಳಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಛೇರಿಯು 24, ಅಕ್ಬರ್ ರಸ್ತೆಯಲ್ಲಿದೆ.

2014 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದಿಲ್ಲಿಯಲ್ಲಿ ಹಾಗೂ  ಉತ್ತರ ಪ್ರದೇಶದಂತಹ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ರಸ್ತೆಗಳ, ರೈಲ್ವೆನಿಲ್ದಾಣಗಳ  ಮರು ನಾಮಕರಣವು ಹೆಚ್ಚಿನ ವಿವಾದ ಮತ್ತು ಚರ್ಚೆಗೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News