ಮಂಗೊಲ್ಪುರಿ ನೆಲಸಮ ಕಾರ್ಯಾಚರಣೆಗೆ ಅಡ್ಡಿಯುಂಟು ಮಾಡಿದ ಆಪ್ ಶಾಸಕ ಪೊಲೀಸ್ ವಶಕ್ಕೆ

Update: 2022-05-10 09:54 GMT

ಹೊಸದಿಲ್ಲಿ: ರಾಜಧಾನಿಯ ಮಂಗೊಲ್ಪುರಿ ಪ್ರದೇಶದಲ್ಲಿ ಮಂಗಳವಾರ ಬಿಜೆಪಿ ಆಡಳಿತದ ಉತ್ತರ ದಿಲ್ಲಿ ಮುನಿಸಿಪಲ್ ಕಾರ್ಪೊರೇಷನ್ ನಡೆಸಿದ ನೆಲಸಮ ಕಾರ್ಯಾಚರಣೆಗೆ ಅಡ್ಡಿಯುಂಟು ಮಾಡಿದ ಆರೋಪದ ಮೇಲೆ ದಿಲ್ಲಿ ಪೊಲೀಸರು ಆಪ್ ಶಾಸಕ ಮುಕೇಶ್ ಅಹ್ಲಾವತ್ ಅವರನ್ನು ವಶಪಡಿಸಿಕೊಂಡಿದ್ದಾರೆ.

ಶಾಸಕರು ನೆಲಸಮ ಕಾರ್ಯಾಚರಣೆ ವೇಳೆ 'ಸಮಸ್ಯೆ' ಸೃಷ್ಟಿಸಿದ್ದಾರೆಂದು ಪೊಲೀಸರು ತಿಳಿಸಿದ್ದಾರಲ್ಲದೆ ಕಾಯಾಚರಣೆ ಮುಗಿದ ನಂತರ ಅವರನ್ನು ಬಿಡುಗಡೆಗೊಳಿಸಲಾಗುವುದು ಎಂದು ಹೇಳಿದ್ದಾರೆ.

ಕಾರ್ಯಾಚರಣೆ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿದ ಶಾಸಕ ಬುಲ್‍ಡೋಜರ್‍ಗಳ ಬಳಕೆಯ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದರು ಎಂದು ಡಿಸಿಪಿ ಸಮೀರ್ ಶರ್ಮ ಹೇಳಿದ್ದಾರೆ. ಸ್ಥಳೀಯರು ಅದಾಗಲೇ ಸ್ಥಳ ತೆರವುಗೊಳಿಸಿರುವುದರಿಂದ ನೆಲಸಮ ಕಾರ್ಯಾಚರಣೆಯ ಅಗತ್ಯವಿಲ್ಲವೆಂದು ಶಾಸಕರು ವಾದಿಸಿದ್ದಾರೆನ್ನಲಾಗಿದೆ.

 ಇನ್ನೊಂದು ನೆಲಸಮ ಕಾರ್ಯಾಚರಣೆ  ದಕಿಣ ದಿಲ್ಲಿ ಮುನಿಸಿಪಲ್ ಕಾರ್ಪೊರೇಷನ್ ವ್ಯಾಪ್ತಿಯ ನ್ಯೂ ಫ್ರೆಂಡ್ಸ್ ಕಾಲನಿ ಪ್ರದೇಶದಲ್ಲಿ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News