×
Ad

ಎಸ್‌ಟಿ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಆಗ್ರಹಿಸಿ ಸಿಎಂಗೆ ಮನವಿ

Update: 2022-05-10 16:49 IST

ಕುಂದಾಪುರ : ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಪ್ರಮಾಣ ಶೇ.೩ ರಿಂದ ೭.೫ಕ್ಕೆ ಹೆಚ್ಚಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಪಂಗಡ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ಉಡುಪಿ ಜಿಲ್ಲೆ ವತಿಯಿಂದ ಕುಂದಾಪುರ ತಹಶಿಲ್ದಾರ್ ಕಿರಣ್ ಗೌರಯ್ಯ ಮೂಲಕ ಸಿಎಂಗೆ ಇಂದು ಮನವಿ ಸಲ್ಲಿಸಲಾಯಿತು.

೧೯೫೮ರ ನಂತರ ೧೯೬೧ರಲ್ಲಿ ನಡೆದ ಜನಗಣತಿಯಲ್ಲಿ ಪರಿಶಿಷ್ಟ ಪಂಗಡದವರ ಜನಸಂಖ್ಯೆ ೧,೯೨,೦೯೬ ರಷ್ಟಿದ್ದು ಇದು ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.೦.೮೧ ರಷ್ಟಿರುತ್ತದೆ. ಪರಿಶಿಷ್ಟ ಪಂಗಡದವರ ಜನಸಂಖ್ಯೆ ಮುಂದಿನ ೫ ಜನಗಣತಿಯಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿ ೨೦೧೧ರಲ್ಲಿ ಅದು ೪೨,೪೮,೯೮೭ ಆಗಿರುತ್ತದೆ. ಅಂದರೆ ಪರಿಶಿಷ್ಟ ಪಂಗಡದವರ ಜನಸಂಖ್ಯೆ ೧೯೬೧ರ ಜನಗಣತಿಗೆ ಹೋಲಿಸಿ ದಲ್ಲಿ ೨೨.೧೧ ರಷ್ಟು ಹೆಚ್ಚಾಗಿರುತ್ತದೆ.

೧೯೫೮ರಲ್ಲಿ ೧,೯೨,೦೯೬ರಷ್ಟಿದ್ದ ಜನಸಂಖ್ಯೆಗೆ ನಿಗದಿಯಾಗಿದ ಮೀಸಲಾತಿ ಶೇಕಡ ೩ರ ಪ್ರಮಾಣ ಇಂದು ಪರಿಶಿಷ್ಟ ಪಂಗಡದ ಜನಸಂಖ್ಯೆ ೪೨,೪೮,೯೮೭ ರಷ್ಟು ಹೆಚ್ಚಿದ್ದರೂ ಕೂಡ ಮೀಸಲಾತಿಯ ಪ್ರಮಾಣ ಶೇಕಡ ೩ರಷ್ಟೇ ಇದೆ. ಇದರಿಂದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಹಾಗೂ ನಿರುದ್ಯೋಗಿಗಳಿಗೆ ಅವರ ಪ್ರಾತಿನಿಧ್ಯತೆ ಸಂಬಂಧ ಅನೇಕ ವರ್ಷಗಳಿಂದ ದೊಡ್ಡ ಅನ್ಯಾಯವಾಗು ತ್ತಿದೆ. ಈ ಹಿನ್ನೆಲೆಯಲ್ಲಿ ಪರಿಶಿಷ್ಟ ಪಂಗಡದವರಿಗೆ ಶೈಕ್ಷಣಿಕ ಸಂಸ್ಥೆಗಳ ಪ್ರವೇಶ ಮತ್ತು ರಾಜ್ಯ ಸರ್ಕಾರದ ಸೇವೆಗಳಲ್ಲಿ ಮೀಸಲಾತಿ ಪ್ರಮಾಣವನ್ನೇ ಜನಸಂಖ್ಯೆ ಅನುಗುಣವಾಗಿ ಶೇ.೭.೫ಕ್ಕೆ ಹೆಚ್ಚಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಕುಂದಾಪುರ ತಾಲೂಕಿನ ಕೊರಗ ಸಂಘಟನೆ, ಮರಾಟಿ ನಾಯ್ಕ ಸಂಘಟನೆ ಹಾಗೂ ಮಲೆಕುಡಿಯ ಸಂಘಟನೆಯ ಮುಖಂಡರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News