×
Ad

ಉಡುಪಿ ಜಿಲ್ಲಾ ಪರಿಶಿಷ್ಟ ಪಂ. ಮೀಸಲಾತಿ ಹೆಚ್ಚಳ ಕ್ರಿಯಾ ಸಮಿತಿ ಅಸ್ತಿತ್ವಕ್ಕೆ

Update: 2022-05-10 16:51 IST

ಉಡುಪಿ : ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಪ್ರಮಾಣವನ್ನು ಕನಿಷ್ಟ ಶೇ.೭.೫೦ಕ್ಕೆ ಏರಿಸು ವಂತೆ ಸರಕಾರವನ್ನು ಒತ್ತಾಯಿಸಲು ಈಗಾಗಲೇ ರಾಜ್ಯದಲ್ಲಿ ರಚನೆ ಆಗಿರುವ ಪರಿಶಿಷ್ಟ ಪಂಗಡ ಮೀಸಲಾತಿ ಹೆಚ್ಚಳ ಕ್ರಿಯಾ ಸಮಿತಿಯನ್ನು ಉಡುಪಿ ಜಿಲ್ಲೆಯಲ್ಲೂ ರಚಿಸಲಾಯಿತು.

ಉಡುಪಿ ಜಿಲ್ಲೆಯ ಕೊರಗ ಸಮುದಾಯದ ಮುಖಂಡ ವಿ.ಗಣೇಶ್ ಕೊರಗ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಮಾಲೋಚನಾ ಸಭೆಯಲ್ಲಿ ಮೀಸಲಾತಿ ಹೆಚ್ಚಳ ಹೋರಾಟದ ಬಗ್ಗೆ ಸಮಗ್ರವಾಗಿ ಚರ್ಚಿಸಲಾಯಿತು. ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಹಾಗೂ ನಿರುದ್ಯೋಗಿಗಳಿಗೆ, ಹಾಲಿ ಉದ್ಯೋಗಿಗಳಿಗೆ ಪ್ರಾತಿ ನಿಧ್ಯತೆಯಲ್ಲಿ ಆದ ಅನ್ಯಾಯ ಮುಂದಿನ ದಿನಗಳಲ್ಲಿ ಆಗಬಾರದು,  ರಾಜಧಾನಿ ಯಲ್ಲಿ ಮೀಸಲಾತಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಹೋರಾಟಕ್ಕೆ ಎಲ್ಲಾ ತಾಲೂಕು, ಜಿಲ್ಲೆಗಳಿಂದ ಬೆಂಬಲ ನೀಡಬೇಕು ಎಂದು ಅವರು ತಿಳಿಸಿದರು.

ಸರಕಾರವನ್ನು ಒತ್ತಾಯಿಸಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬೇಂದು ಉಪಸ್ಥಿತರಿದ್ದ ಸಂಘಟನೆಗಳ ಪದಾಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದರು. ತಾಲೂಕು ವ್ಯಾಪ್ತಿಯಲ್ಲಿ ಕೊರಗ, ಮರಾಠಿ, ಮಲೆಕುಡಿಯ ಸಮುದಾಯದ ಮುಖಂಡರನ್ನು ಸೇರಿಸಿಕೊಂಡು ತಂಡವಾಗಿ ಜವಾಬ್ದಾರಿಗಳನ್ನು ನಿಭಾಯಿಸುವ ಬಗ್ಗೆ ಚರ್ಚೆ ನಡೆಸಿ ತಂಡಗಳನ್ನು ರಚಿಸಲಾಗಿದೆ.

ಜಿಲ್ಲೆಯಲ್ಲಿ ಮೇ 20ರಂದು ಜಿಲ್ಲಾ ಮಟ್ಟದಲ್ಲಿ ಮೇ ೨೦ರಂದು ೩೦೦ ಮಂದಿ ಪರಿಶಿಷ್ಟ ಪಂಗಡದ ಜನತೆಯು ಮೆರವಣಿಗೆಯಲ್ಲಿ ಸಾಗಿ ಉಡುಪಿ ಜಿಲ್ಲಾಧಿಕಾರಿ ಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲು ಸಭೆಯಲ್ಲಿ ಸರ್ವಾನುಮತದ ತೀರ್ಮಾನ ತೆಗೆದುಕೊಳ್ಳಲಾಯಿತು.

ಸಭೆಯಲ್ಲಿ ಕೊರಗ ಸಮುದಾಯದ ಮುಖಂಡರಾದ ಗೌರಿ ಕೆಂಜೂರು,  ಶೇಖರ ಮರವಂತೆ, ಬಾಬು ಪಾಂಗಳ, ಡಾ.ಬಾಬು ಬೆಳ್ತಂಗಡಿ,  ಕುಮಾರದಾಸ್ ಹಾಲಾಡಿ, ಶ್ರೀಧರ ನಾಡ, ಸುದರ್ಶನ್ ಕೋಟ, ಪ್ರಕಾಶ್ ಗಂಗೊಳ್ಳಿ, ಸತೀಶ್ ಎಳಜಿತ್, ಮರಾಠಿ ಸಮುದಾಯದ ಮುಖಂಡರಾದ ಅನಂತ ನಾಯ್ಕ್ ಸರಳೇ ಬೆಟ್ಟು, ರಮೇಶ್ ಕೊಕ್ಕರ್ಣೆ, ಕೃಷ್ಣ ನಾಯ್ಕ್ ಆತ್ರಾಡಿ, ಗೋಪಾಲ ನಾಯ್ಕ್ ಸಗ್ರಿ, ಸುಧಾಕರ ನಾಯ್ಕ್ ಮಣಿಪಾಲ, ಭೋಜ ನಾಯ್ಕ್ ಬೈಂದೂರು, ಸಂತೋಷ ನಾಯ್ಕ್ ಬೈಂದೂರು, ಮಲೆಕುಡಿಯ ಸಮುದಾಯದ ಮುಖಂಡ ರಾದ ಗಂಗಾಧರ ಗೌಡ, ಸುಧಾಕರ ಗೌಡ, ಶ್ರೀಧರಗೌಡ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News