ವೆಸ್ಟ್ ಬ್ಯಾಂಕ್: ದಾಳಿಯ ವೇಳೆ ಅಲ್ ಜಝೀರಾ ಪತ್ರಕರ್ತೆಯನ್ನು ಗುಂಡಿಕ್ಕಿ ಕೊಂದ ಇಸ್ರೇಲಿ ಸೇನೆ; ವರದಿ

Update: 2022-05-11 05:33 GMT
ಶಿರೀನ್ ಅಬು ಅಕ್ಲೆಹ್ (Photo credit: Al Jazeera)

ಜೆರುಸಲೇಂ (ಎಪಿ): ಅಲ್ ಜಝೀರಾ ನೆಟ್‌ವರ್ಕ್‌ನ ಪತ್ರಕರ್ತೆಯೊಬ್ಬರು ಬುಧವಾರ ಮುಂಜಾನೆ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಗುಂಡೇಟಿನಿಂದ ಸಾವನ್ನಪ್ಪಿದ್ದಾರೆ ಎಂದು ಫೆಲೆಸ್ತೀನ್ ಆರೋಗ್ಯ ಸಚಿವಾಲಯ ತಿಳಿಸಿದೆ.

ಶಿರೀನ್ ಅಬು ಅಕ್ಲೆಹ್ ಅವರ ಮುಖಕ್ಕೆ ಗುಂಡು ಹಾರಿಸಲಾಯಿತು ಮತ್ತು ಅವರು ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಜೆರುಸಲೇಂ ಮೂಲದ ಅಲ್-ಕುದ್ಸ್ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರುವ ಮತ್ತೊಬ್ಬ ಫೆಲೆಸ್ತೀನಿ ಪತ್ರಕರ್ತ ಕೂಡ ಗಾಯಗೊಂಡಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.

ಉತ್ತರ ಪಶ್ಚಿಮ ದಂಡೆಯ ಜೆನಿನ್ ಪಟ್ಟಣದಲ್ಲಿ ಇಸ್ರೇಲಿ ಸೇನೆಯ ದಾಳಿಯ ಸಂದರ್ಭದಲ್ಲಿ ಈ ಗುಂಡಿನ ದಾಳಿ ನಡೆದಿದೆ.

ಇಸ್ರೇಲಿ ಸೇನೆಯ ಗುಂಡೇಟಿನಿಂದ ಪತ್ರಕರ್ತೆ ಸಾವನ್ನಪ್ಪಿದ್ದಾಗಿ ಅಲ್ ಜಝೀರಾ ತನ್ನ ವರದಿಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News