×
Ad

ಉಡುಪಿ: ನೂತನ ಸಿಇಓ ಅಧಿಕಾರ ಸ್ವೀಕಾರ

Update: 2022-05-11 21:57 IST
ಪ್ರಸನ್ನ ಎಚ್

ಉಡುಪಿ : ಉಡುಪಿ ಜಿಲ್ಲಾ ಪಂಚಾಯತ್‌ನ ನೂತನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಚಿಕ್ಕಮಗಳೂರು ಜಿಲ್ಲೆ ಕಬ್ಬಿಗನಹಳ್ಳಿಯವರಾದ ಪ್ರಸನ್ನ ಎಚ್. (41) ಇಂದು ಪೂರ್ವಾಹ್ನ ಅಧಿಕಾರ ಸ್ವೀಕರಿಸಿದ್ದಾರೆ.

ಪ್ರಸನ್ನ ಈ ಹಿಂದೆ ಹೊಸದಿಲ್ಲಿಯ ಕರ್ನಾಟಕ ಭವನದಲ್ಲಿ ಡೆಪ್ಯುಟಿ ರೆಸಿಡೆಂಟ್ ಕಮಿಷನರ್ ಆಗಿ ಕಾರ್ಯ ನಿರ್ವಹಿಸುತಿದ್ದರು. ಉಡುಪಿಯ ಸಿಇಓ ಆಗಿದ್ದ ಡಾ.ನವೀನ್ ಭಟ್ ವೈ. ಕೆಎಸ್ಸಾರ್ಟಿಸಿಯ ನಿರ್ದೇಶಕರಾಗಿ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News