ಪಂಜಾಬ್: 1857ರ ಬಂಡಾಯದಲ್ಲಿ ಕೊಲ್ಲಲ್ಪಟ್ಟಿದ್ದ 282 ಭಾರತೀಯ ಯೋಧರ ಅಸ್ಥಿಪಂಜರಗಳು ಪತ್ತೆ

Update: 2022-05-11 16:48 GMT
ಫೋಟೊ ಕೃಪೆ: ANI 

ಚಂಡಿಗಡ, ಮೇ 11: 1857ರಲ್ಲಿ ದೇಶದ ಮೊದಲ ಸ್ವಾತಂತ್ರ ಸಂಗ್ರಾಮದಲ್ಲಿ ಭಾಗವಹಿಸಿದ್ದ 282 ಭಾರತೀಯ ಯೋಧರ ಅಸ್ಥಿಪಂಜರಗಳು ಅಮೃತಸರ ಸಮೀಪ ಉತ್ಖನನದ ವೇಳೆ ಪತ್ತೆಯಾಗಿವೆ. ಯೋಧರು ಹಂದಿ ಮತ್ತು ದನಗಳ ನೆಣವನ್ನು ಲೇಪಿಸಿದ್ದ ಗುಂಡುಗಳ ಬಳಕೆಯ ವಿರುದ್ಧ ದಂಗೆಯೆದ್ದಿದ್ದರು ಎನ್ನಲಾಗಿದೆ.

ಈ ಅಸ್ಥಿಪಂಜರಗಳು 1857ರಲ್ಲಿ ಬ್ರಿಟಿಷರ ವಿರುದ್ಧ ಭಾರತದ ಮೊದಲ ಸ್ವಾತಂತ್ರ ಸಂಗ್ರಾಮದಲ್ಲಿ ಕೊಲ್ಲಲ್ಪಟ್ಟಿದ್ದ 282 ಭಾರತೀಯ ಯೋಧರದ್ದಾಗಿವೆ. ಅಮೃತಸರ ಸಮೀಪದ ಅಜ್ನಾಲಾದಲ್ಲಿಯ ಧಾರ್ಮಿಕ ರಚನೆಯ ಕೆಳಗಿರುವ ಬಾವಿಯಿಂದ ಈ ಅಸ್ಥಿಪಂಜರಗಳನ್ನು ಉತ್ಖನನ ಮಾಡಲಾಗಿದೆ ಎಂದು ಪಂಜಾಬ ವಿವಿಯ ಮಾನವಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರೊಫೆಸರ್ ಆಗಿರುವ ಡಾ.ಜೆ.ಎಸ್.ಸೆಹ್ರಾವತ್ ತಿಳಿಸಿದರು.

ಈ ಯೋಧರು ಹಂದಿ ಮತ್ತು ದನಗಳ ನೆಣವನ್ನು ಲೇಪಿಸಿದ್ದ ಗುಂಡುಗಳ ಬಳಕೆಯ ವಿರುದ್ಧ ದಂಗೆಯೆದ್ದಿದ್ದರು ಎಂದು ಅಧ್ಯಯನವೊಂದು ಸೂಚಿಸಿದೆ. ನಾಣ್ಯಗಳು,ಪದಕಗಳು,ಡಿಎನ್ಎ ಅಧ್ಯಯನ, ಧಾತುರೂಪದ ವಿಶ್ಲೇಷಣೆಗಳು, ಮಾನವಶಾಸ್ತ್ರೀಯ ವಿಶ್ಲೇಷಣೆ, ರೇಡಿಯೊ-ಕಾರ್ಬನ್ ಡೇಟಿಂಗ್ ಇವೆಲ್ಲವೂ ಇದನ್ನೇ ಸೂಚಿಸುತ್ತಿವೆ ಎಂದು ಸೆಹ್ರಾವತ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News