​ಉಡುಪಿ; ಪಿಯುಸಿ ಪರೀಕ್ಷೆ : 107 ಮಂದಿ ಗೈರು

Update: 2022-05-12 12:09 GMT

ಉಡುಪಿ : ಗುರುವಾರ ನಡೆದ ದ್ವಿತೀಯ ಪಿಯುಸಿಯ ಎರಡು  ಪರೀಕ್ಷೆಗಳಿಗೆ ಒಟ್ಟು 107 ಮಂದಿ ಗೈರು ಹಾಜರಾಗಿದ್ದಾರೆ ಎಂದು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂದು ಪೋಲಿಟಿಕಲ್ ಸಾಯನ್ಸ್ ಹಾಗೂ ಸಂಖ್ಯಾಶಾಸ್ತ್ರ ಪರೀಕ್ಷೆಗಳು ನಡೆದಿದ್ದು ಜಿಲ್ಲೆಯ ೨೮ ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಪರೀಕ್ಷೆಗಳಿಗೆ ಕ್ರಮವಾಗಿ ೭೬ ಮತ್ತು ೩೧ ಮಂದಿ ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ.

ಒಟ್ಟು ೧೬೬೬ ಮಂದಿ ವಿದ್ಯಾರ್ಥಿಗಲು ಪೋಲಿಟಿಕಲ್ ಸಾಯನ್ಸ್ ಪರೀಕ್ಷೆಗೆ ಹೆಸರು ನೊಂದಾಯಿಸಿಕೊಂಡಿದ್ದು, ೧೫೯೦ ಮಂದಿ ಪರೀಕ್ಷೆ ಬರೆದು ೭೬ ಮಂದಿ ಗೈರಾಗಿದ್ದಾರೆ. ಅದೇ ರೀತಿ ಸಂಖ್ಯಾ ಶಾಸ್ತ್ರ ಪರೀಕ್ಷೆಗೆ ಹೆಸರು ನೊಂದಾಯಿಸಿ ಕೊಂಡ ೩೩೨೯ ಮಂದಿಯಲ್ಲಿ ೩೨೯೮ ಮಂದಿ ಇಂದು ಪರೀಕ್ಷೆ ಬರೆದು ೩೧ ಮಂದಿ ಹಾಜರಾಗಿಲ್ಲ ಎಂದು ಡಿಡಿಪಿಯು ವರದಿ ತಿಳಿಸಿದೆ.

ಕಳೆದ ಮೇ ೧೦ರಂದು ಜಿಲ್ಲೆಯಲ್ಲಿ ನಡೆದ ದ್ವಿತೀಯ ಪಿಯುಸಿ ಇತಿಹಾಸ ಪರೀಕ್ಷೆಗೆ ೧೭೧ ಮಂದಿ ಹಾಗೂ ಭೌತಶಾಸ್ತ್ರ ಪರೀಕ್ಷೆಗೆ ೪೧ ಮಂದಿ ಗೈರುಹಾಜರಾಗಿದ್ದರು ಎಂದು ತಿಳಿದುಬಂದಿದೆ.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News