ಉಡುಪಿ ಜಿಲ್ಲೆಯಾದ್ಯಂತ ಮುಂದುವರಿದ ಮೋಡ ಕವಿದ ವಾತಾವರಣ

Update: 2022-05-12 15:17 GMT

ಉಡುಪಿ : ಜಿಲ್ಲೆಯಲ್ಲಿ ಇಂದು ಇಡೀ ದಿನ ಮೋಡ ಕವಿದ ವಾತಾವರಣವಿದ್ದು, ಅಪರಾಹ್ನದ ಬಳಿಕ ಅಲ್ಲಲ್ಲಿ ಹನಿಹನಿ ಮಳೆ ಸುರಿದಿದೆ. ಇಂದು ಇಡೀ ದಿನ ಜಿಲ್ಲೆಯ ಜನತೆಗೆ ಸೂರ್ಯನ ದರ್ಶನವಾಗಲಿಲ್ಲ.

ನಿನ್ನೆಯ ರೀತಿಯಲ್ಲಿ ಇಂದು ಮಳೆ ಸುರಿಯದ ಕಾರಣ ಜನರಿಗೆ ಯಾವುದೇ ಸಮಸ್ಯೆಯಾಗಿಲ್ಲ. ಮಳೆಯ ಪರಿಣಾಮವಾಗಿ ಕಳೆದೆರಡು ದಿನಗಳಿಂದ ಜಿಲ್ಲೆಯ ಉಷ್ಣಾಂಶ ತಗ್ಗಿದೆ. ಉಷ್ಣಾಂಶವು ೩೩ ಡಿಗ್ರಿ ಸೆಲ್ಷಿಯಸ್‌ನಿಂದ ೨೭-೨೮ಕ್ಕೆ ಇಳಿದಿದೆ. ಇನ್ನೂ ಎರಡು ದಿನಗಳ ಕಾಲ ಜಿಲ್ಲೆಯಲ್ಲಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಮುನ್ಸೂಚನೆ ತಿಳಿಸಿದೆ.

ಇಂದು ಬೆಳಗ್ಗೆ ೮:೩೦ಕ್ಕೆ ಮುಕ್ತಾಯಗೊಂಡಂತೆ ಕಳೆದ ೨೪ ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ೩೬.೪ಮಿ.ಮೀ. ಮಳೆ ಬಿದ್ದಿದೆ. ಬೈಂದೂರಿನಲ್ಲಿ ಅತ್ಯಧಿಕ ೫೫.೬ಮಿ.ಮೀ., ಬ್ರಹ್ಮಾವರದಲ್ಲಿ ೪೮.೬ಮಿ.ಮೀ., ಕುಂದಾಪುರದಲ್ಲಿ ೪೬.೪ ಮಿ.ಮೀ.,ಹೆಬ್ರಿಯಲಿ ೩೨.೧ಮಿ.ಮೀ., ಉಡುಪಿಯಲ್ಲಿ ೩೧.೭ಮಿ.ಮೀ., ಕಾಪುವಿನಲ್ಲಿ ೧೯.೭ಮಿ.ಮೀ. ಹಾಗೂ ಕಾರ್ಕಳದಲ್ಲಿ ೧೨.೩ಮಿ.ಮೀ. ಮಳೆಯಾದ ಬಗ್ಗೆ ವರದಿ ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News