ಗೂಗಲ್ ಅನುವಾದಕ್ಕೆ ಈಗ ಕೊಂಕಣಿ ಭಾಷೆ ಸೇರ್ಪಡೆ
Update: 2022-05-13 11:46 IST
ಪಣಜಿ: ಈಗ ಗೂಗಲ್ ಟ್ರಾನ್ಸ್‌ಲೇಟ್‌ಗೆ ಇನ್ನೂ 24 ಭಾಷೆಗಳನ್ನು ಸೇರಿಸಲಾಗಿದೆ, ಅದರಲ್ಲಿ ಕೊಂಕಣಿ ಭಾಷೆ ಕೂಡ ಒಂದು. ಪ್ರಪಂಚದಾದ್ಯಂತದ ಕೊಂಕಣಿ ಭಾಷಿಕರಿಗೆ ಇದು ಸಂತೋಷದ ವಿಚಾರವಾಗಿದೆ.
24 ಭಾಷೆಗಳ ಸೇರ್ಪಡೆಯನ್ನು ಘೋಷಿಸಿದ ಗೂಗಲ್, ಹೆಚ್ಚಿನ ತಂತ್ರಜ್ಞಾನಗಳಲ್ಲಿ ಪ್ರತಿನಿಧಿಸದ ಭಾಷೆಗಳ ಅಡೆತಡೆಗಳನ್ನು ಮುರಿಯಲು ಬಯಸಿದೆ ಎಂದು ಹೇಳಿದೆ.
“ಕೆಲವು ವರ್ಷಗಳಿಂದ ಗೂಗಲ್ ಅನುವಾದವು ಭಾಷೆಯ ಅಡೆತಡೆಗಳನ್ನು ಬೇಧಿಸಲು ಹಾಗೂ ಪ್ರಪಂಚದಾದ್ಯಂತದ ಸಮುದಾಯಗಳನ್ನು ಸಂಪರ್ಕಿಸಲು ಸಹಾಯ ಮಾಡಿದೆ ಹಾಗೂ ಹೆಚ್ಚಿನ ಜನರನ್ನು ತಲುಪಲು ನಾವು ಬಯಸುತ್ತೇವೆ. ಆದ್ದರಿಂದ ಇಂದು ನಾವು ಅನುವಾದಕ್ಕೆ 24 ಭಾಷೆಗಳನ್ನು ಸೇರಿಸಿದ್ದೇವೆ ಎಂದು ಗೂಗಲ್ ಹೇಳಿದೆ.
ಗೂಗಲ್ ಅನುವಾದಕ್ಕೆ ಸೇರ್ಪಡೆಯಾಗಿರುವ ಜಗತ್ತಿನಾದ್ಯಂತ ಇರುವ 133 ಭಾಷೆಗಳಲ್ಲಿ ಕೊಂಕಣಿಯೂ ಒಂದಾಗಿದೆ.