ಮುಂಬೈನಲ್ಲಿ ಶಿವಸೇನೆಯಿಂದ ಶನಿವಾರ ಬೃಹತ್ ರ‍್ಯಾಲಿ, ಬಿಎಂಸಿ ಚುನಾವಣೆ ಪ್ರಚಾರಕ್ಕೆ ಚಾಲನೆ

Update: 2022-05-13 08:56 GMT

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಶನಿವಾರ ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಬೃಹತ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುವ ಮೂಲಕ ಮಹಾರಾಷ್ಟ್ರದಲ್ಲಿ ಮುಂಬರುವ ನಗರ  ಸಂಸ್ಥೆಗಳ ಚುನಾವಣೆ ವಿಶೇಷವಾಗಿ  ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಚುನಾವಣೆಗೆ ತಮ್ಮ ಪಕ್ಷದ ಪ್ರಚಾರವನ್ನು ಆರಂಭಿಸಲಿದ್ದಾರೆ.

ಕೊರೋನ ಆರಂಭವಾದ ನಂತರ ಇದು ಶಿವಸೇನೆಯ ಮೊದಲ ಮೆಗಾ ರ್ಯಾಲಿಯಾಗಿದ್ದು, ಹಿಂದುತ್ವ ಹಾಗೂ  ಇತರ ವಿಷಯಗಳ ಬಗ್ಗೆ ಮುಖ್ಯಮಂತ್ರಿ  ಠಾಕ್ರೆ ಅವರು ಎಂಎನ್‌ಎಸ್ ಮತ್ತು ಬಿಜೆಪಿಯಂತಹ ರಾಜಕೀಯ ವಿರೋಧಿಗಳನ್ನು ಎದುರಿಸುವ ನಿರೀಕ್ಷೆಯಿದೆ.

ಇದು  ಉದ್ಧವ್ ಠಾಕ್ರೆ ಅವರು ಮುಖ್ಯಮಂತ್ರಿಯಾದ ನಂತರ ಅವರ ಮೊದಲ ಭೌತಿಕ ರಾಜಕೀಯ ರ್ಯಾಲಿಯಾಗಿದೆ. ರಾಜ್ಯಾದ್ಯಂತ ಬೆಂಬಲಿಗರು ಪಾಲ್ಗೊಳ್ಳುವ ನಿರೀಕ್ಷೆಯಿರುವುದರಿಂದ ರ್ಯಾಲಿಯಲ್ಲಿ ಭಾರಿ ಜನಸ್ತೋಮವನ್ನು ಶಿವಸೇನೆ ನಿರೀಕ್ಷಿಸುತ್ತದೆ.  ಠಾಕ್ರೆ ಅವರು ಸಂಜೆ 7:30 ರ ನಂತರ ಭಾಷಣ ಮಾಡಲಿದ್ದಾರೆ ಹಾಗೂ  ಇತರ ಹಿರಿಯ ಸೇನಾ ನಾಯಕರು ಸಿಎಂಗಿಂತ ಮೊದಲು  ಮಾತನಾಡಲಿದ್ದಾರೆ.

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಕ್ಯಾಬಿನೆಟ್ ಸಚಿವ ಆದಿತ್ಯ ಠಾಕ್ರೆ ಅವರೊಂದಿಗೆ ಸೇನಾ ಮುಖ್ಯಸ್ಥ ಬಾಳಾಸಾಹೇಬ್ ಠಾಕ್ರೆ ಅವರ ಪೋಸ್ಟರ್‌ಗಳು ಮುಂಬೈನಾದ್ಯಂತ ಕಾಣಿಸಿಕೊಂಡಿವೆ. ಪಕ್ಷವು ರ್ಯಾಲಿಗಾಗಿ ವೀಡಿಯೊ ಟೀಸರ್ ಅನ್ನು ಸಹ ಬಿಡುಗಡೆ ಮಾಡಿದೆ. ಟೀಸರ್‌ನಲ್ಲಿ ಬಾಳ್ ಠಾಕ್ರೆ ಅವರು ಶಿವಸೈನಿಕರ ಬೆಂಬಲದಿಂದ ನಾನು ಸೇನಾ ಪ್ರಮುಖನಾಗಿದ್ದೇನೆ ಎಂದು ಹೇಳಿರುವುದು ಕೇಳಿಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News