ತಕ್ಷಣವೇ ಜಾರಿಗೆ ಬರುವಂತೆ ಗೋಧಿ ರಫ್ತು ನಿಷೇಧಿಸಿದ ಭಾರತ

Update: 2022-05-14 05:13 GMT
Photo: PTI

ಹೊಸದಿಲ್ಲಿ:  ದೇಶದಲ್ಲಿ ಗೋಧಿ  ಬೆಲೆ ಏರಿಕೆಯನ್ನು ನಿಯಂತ್ರಿಸುವ ಕ್ರಮಗಳ ಭಾಗವಾಗಿ ಭಾರತವು ತಕ್ಷಣವೇ ಜಾರಿಗೆ ಬರುವಂತೆ ಗೋಧಿ ರಫ್ತುಗಳನ್ನು ನಿಷೇಧಿಸಿದೆ ಎಂದು ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

"ಗೋಧಿಯ ರಫ್ತು ನೀತಿಯನ್ನು ತಕ್ಷಣವೇ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ" ಎಂದು ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯ (ಡಿಜಿಎಫ್‌ಟಿ) ಮೇ 13 ರ ಅಧಿಸೂಚನೆಯಲ್ಲಿ ತಿಳಿಸಿದೆ.

ಭಾರತ ಸರಕಾರವು ಇತರ ದೇಶಗಳಿಗೆ ಅವುಗಳ ಆಹಾರ ಭದ್ರತೆ ಅಗತ್ಯತೆಗಳನ್ನು ಪೂರೈಸಲು ಮತ್ತು ಆಯಾ ಸರಕಾರಗಳ ಕೋರಿಕೆಯ ಆಧಾರದ ಮೇಲೆ ನೀಡುವ ಅನುಮತಿಯ ಮೇರೆಗೆ ಗೋಧಿ ರಫ್ತುಗಳನ್ನು ಅನುಮತಿಸಲಾಗುವುದು ಎಂದು ಅದು ಸ್ಪಷ್ಟಪಡಿಸಿದೆ.

 ಈರುಳ್ಳಿ ಬೀಜಗಳ ರಫ್ತು ಷರತ್ತುಗಳನ್ನು ಸಡಿಲಿಸುವುದಾಗಿ ಡಿಜಿಎಫ್‌ಟಿ ಪ್ರತ್ಯೇಕ  ಅಧಿಸೂಚನೆಯಲ್ಲಿ  ಘೋಷಿಸಿತು.

"ಈರುಳ್ಳಿ ಬೀಜಗಳ ರಫ್ತು ನೀತಿಯನ್ನು ತಕ್ಷಣದ ಅಂಶದ ಆಧಾರದಲ್ಲಿ ನಿರ್ಬಂಧಿತ ವರ್ಗಕ್ಕೆ ಒಳಪಡಿಸಲಾಗಿದೆ" ಎಂದು ಅದು ಹೇಳಿದೆ.

ಈ ಹಿಂದೆ ಈರುಳ್ಳಿ ರಫ್ತು ಮಾಡುವುದನ್ನು ನಿಷೇಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News