×
Ad

ಒಡಿಶಾ: ಕೋವಿಡ್ ಸಾಂಕ್ರಾಮಿಕದ ಬಳಿಕ ಶೇ.30 ವಿದ್ಯಾರ್ಥಿಗಳು ಶಾಲೆಗಳಿಂದ ದೂರ

Update: 2022-05-14 20:00 IST

ಸಾಂದರ್ಭಿಕ ಚಿತ್ರ
 

ಭುವನೇಶ್ವರ,ಮೇ 14: ಒಡಿಶಾದಲ್ಲಿ ಕೋವಿಡ್ ಸಾಂಕ್ರಾಮಿಕದಿಂದಾಗಿ ಎರಡು ವರ್ಷಗಳ ವಿರಾಮದ ಬಳಿಕ ತರಗತಿಗಳಲ್ಲಿ ಬೋಧನೆ ಪುನರಾರಂಭಗೊಂಡಿದ್ದು,ಶೇ.30ರಷ್ಟು ವಿದ್ಯಾರ್ಥಿಗಳು ಶಾಲೆಗಳಿಗೆ ಮರಳಿಲ್ಲ. ಅವರನ್ನು ಶಾಲೆಗಳಿಗೆ ವಾಪಸ್ ಕರೆತರುವ ನಿಟ್ಟಿನಲ್ಲಿ ಶ್ರಮಿಸುವಂತೆ ರಾಜ್ಯ ಸರಕಾರವು ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ.

ಶೇ.70ರಷ್ಟು ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗುತ್ತಿದ್ದಾರೆ ಎಂದು ಶಾಲಾ ಮತ್ತು ಸಾಮೂಹಿಕ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಬಿ.ಪಿ.ಸೇಥಿ ತಿಳಿಸಿದ್ದಾರೆ.

ಗೈರುಹಾಜರಾಗಿರುವ ವಿದ್ಯಾರ್ಥಿಗಳು ಎಲ್ಲಿದ್ದಾರೆಂದು ತಿಳಿದುಕೊಳ್ಳಲು ಸಮಗ್ರ ವಿಶ್ಲೇಷಣೆ ಅಗತ್ಯವಿದೆ. ಈ ವಿದ್ಯಾರ್ಥಿಗಳು ಶಾಲೆಯನ್ನು ತೊರೆದಿರಬಹುದು,ಹೆತ್ತವರೊಂದಿಗೆ ಬೇರೆ ಕಡೆ ತೆರಳಿರಬಹುದು, ಸಾಂಕ್ರಾಮಿಕ ಮತ್ತು ಇತರ ಕಾರಣಗಳಿಂದಾಗಿ ಬೋಧನೆಗಳು ಸ್ಥಗಿತಗೊಂಡಿದ್ದರಿಂದ ಶೈಕ್ಷಣಿಕ ಚಟುವಟಿಕೆಗಳಲ್ಲಿ ಆಸಕ್ತಿ ಕಳೆದುಕೊಂಡಿರಬಹುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News