×
Ad

ದಿಲ್ಲಿಯಲ್ಲಿ ಪ್ರತಿ ಕೆಜಿ ಸಿಎನ್‌ಜಿ ಬೆಲೆ 2 ರೂ. ಏರಿಕೆ

Update: 2022-05-15 10:44 IST

ಹೊಸದಿಲ್ಲಿ: ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ (ಐಜಿಎಲ್) ದಿಲ್ಲಿ-ಎನ್‌ಸಿಆರ್‌ನಲ್ಲಿ ಸಂಕುಚಿತ ನೈಸರ್ಗಿಕ ಅನಿಲದ (ಸಿಎನ್‌ಜಿ) ಬೆಲೆಯನ್ನು ಪ್ರತಿ ಕೆಜಿಗೆ 2 ರೂಪಾಯಿ ಹೆಚ್ಚಿಸಿದೆ.  ಬೆಲೆ ಏರಿಕೆಯು  ರವಿವಾರ ಬೆಳಿಗ್ಗೆ 6 ಗಂಟೆಗೆ ಜಾರಿಗೆ ಬರಲಿದೆ.

ಇತ್ತೀಚಿನ ಏರಿಕೆಯೊಂದಿಗೆ  ಸಿಎನ್‌ಜಿ ಈಗ ದಿಲ್ಲಿಯಲ್ಲಿ ಪ್ರತಿ ಕೆಜಿಗೆ  73.61 ರೂ., ನೋಯ್ಡಾದಲ್ಲಿ  76.17 ರೂ. ಹಾಗೂ ಗುರುಗ್ರಾಮ್‌ನಲ್ಲಿ  81.94  ರೂ.ಆಗಿದೆ.

ಏತನ್ಮಧ್ಯೆ, ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್  ದೇಶದ ಇತರ ಭಾಗಗಳಲ್ಲಿ ಗ್ಯಾಸ್ ಬೆಲೆಯನ್ನು ಹೆಚ್ಚಿಸಿದೆ. ರೇವಾರಿಯಲ್ಲಿ, ಸಿಎನ್‌ಜಿ ಪ್ರತಿ ಕೆಜಿಗೆ ರೂ. 84.07 ರಂತೆ ಮಾರಾಟವಾಗುತ್ತಿದೆ. ಕರ್ನಾಲ್ ಹಾಗೂ  ಕೈತಾಲ್‌ನಲ್ಲಿ ಕೆಜಿಗೆ ರೂ. 82.27 ಆಗಿದೆ. ಕಾನ್ಪುರ, ಹಮೀರ್‌ಪುರ ಮತ್ತು ಫತೇಪುರ್‌ನಲ್ಲಿ ರೂ. 85.40 ಹಾಗೂ  ಅಜ್ಮೀರ್, ಪಾಲಿ ಮತ್ತು ರಾಜ್‌ಸಮಂದ್‌ನಲ್ಲಿ ರೂ. 83.88ಕ್ಕೆ ತಲುಪಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News