ನ್ಯಾಯಾಲಯದ ಆದೇಶದಂತೆ ಜ್ಞಾನವಾಪಿ ಮಸೀದಿ ಕಾಂಪ್ಲೆಕ್ಸ್ ಚಿತ್ರೀಕರಣ ಮುಕ್ತಾಯ

Update: 2022-05-16 07:08 GMT

ವಾರಣಾಸಿ(ಉತ್ತರ ಪ್ರದೇಶ): ನ್ಯಾಯಾಲಯದ ಆದೇಶದಂತೆ ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಜ್ಞಾನವಾಪಿ ಮಸೀದಿ ಸಂಕೀರ್ಣದ ಲ್ಲಿ ನಡೆಯುತ್ತಿದ್ದ ವೀಡಿಯೊಗ್ರಫಿ ಸಮೀಕ್ಷೆಯು ಮುಂದಿನ ವಿಚಾರಣೆಗೆ ಒಂದು ದಿನ ಮುಂಚಿತವಾಗಿ ಕೊನೆಗೊಂಡಿದೆ ಎಂದು NDTV ವರದಿ ಮಾಡಿದೆ.  

ಸಂಕೀರ್ಣದ ಬಳಿ ಬಿಗಿ ಭದ್ರತೆ ಹಾಗೂ  ನಿರ್ಬಂಧಗಳ ನಡುವೆ ಇಂದು ಬೆಳಿಗ್ಗೆ ಕೊನೆಯ ದಿನದ ಚಿತ್ರೀಕರಣ ಆರಂಭವಾಯಿತು.

 ಮಸೀದಿ ಸಂಕೀರ್ಣದೊಳಗಿನ ಕೊಳದೊಳಗೆ ಶಿವಲಿಂಗ ಕಂಡುಬಂದಿದೆ. ಅದರ ರಕ್ಷಣೆಗಾಗಿ ಸಿವಿಲ್ ನ್ಯಾಯಾಲಯದ ಮೊರೆ ಹೋಗುವುದಾಗಿ ವಕೀಲ ವಿಷ್ಣು ಜೈನ್ ಅವರು 'ಆಜ್ ತಕ್/ಇಂಡಿಯಾ ಟುಡೇ ಟಿವಿ'ಗೆ ಫೋನ್ ಮೂಲಕ ತಿಳಿಸಿದರು.

ಶಿವಲಿಂಗವು 12 ಅಡಿ 8 ಇಂಚು ವ್ಯಾಸವನ್ನು ಹೊಂದಿದೆ.

ಮಸೀದಿ ಸಂಕೀರ್ಣದೊಳಗಿನ ಕೊಳವನ್ನು ಶುದ್ಧೀಕರಣಕ್ಕಾಗಿ ಬಳಸಲಾಗುತ್ತಿತ್ತು ಎಂದು ವಕೀಲ ಸುಭಾಷ್ ನಂದನ್ ಚತುರ್ವೇದಿ ಹೇಳಿದ್ದಾರೆ.

"ಸಮೀಕ್ಷಾ ಆಯೋಗವು ಇಂದು ತನ್ನ ಕಾರ್ಯವನ್ನು ಪೂರ್ಣಗೊಳಿಸಿದೆ.  ಅದು ಎಲ್ಲಾ ಸ್ಥಳಗಳನ್ನು ವಿವರವಾಗಿ ಚಿತ್ರೀಕರಿಸಿದೆ. ಮೂರು ಗುಮ್ಮಟಗಳು, ಭೂಗತ ನೆಲಮಾಳಿಗೆಗಳು, ಕೊಳ.. ಎಲ್ಲವನ್ನೂ ವೀಡಿಯೊ  ರೆಕಾರ್ಡ್ ಮಾಡಲಾಗಿದೆ. ಅಡ್ವಕೇಟ್ ಕಮಿಷನರ್ ತಮ್ಮ ವರದಿಯನ್ನು ನಾಳೆ ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ. ವರದಿಯನ್ನು ಮೂವರು ಸದಸ್ಯರ ಆಯೋಗ ಸಿದ್ಧಪಡಿಸಲಿದ್ದಾರೆ. ಸಮಯಕ್ಕೆಸರಿಯಾಗಿ ವರದಿಯನ್ನು ಪೂರ್ಣಗೊಳಿಸದಿದ್ದರೆ, ನಾವು ನ್ಯಾಯಾಲಯದಿಂದ ಹೆಚ್ಚು ಸಮಯ ಕೇಳುತ್ತೇವೆ”ಎಂದು ಸರಕಾರಿ ವಕೀಲ ಮಹೇಂದ್ರ ಪ್ರಸಾದ್ ಪಾಂಡೆ NDTV ಗೆ ತಿಳಿಸಿದರು, ಇಡೀ ಪ್ರಕ್ರಿಯೆಯು ಶಾಂತಿಯುತವಾಗಿ ನಡೆದಿದೆ ಎಂದು ಹೇಳಿದರು.

ರವಿವಾರದತನಕ  ಶೇ. 65ರಷ್ಟು ಸಮೀಕ್ಷೆ ಪೂರ್ಣಗೊಂಡಿತ್ತು.

ಮಸೀದಿಯು ಕಾಶಿ ವಿಶ್ವನಾಥ ದೇವಾಲಯದ ಸಮೀಪದಲ್ಲಿದೆ ಮತ್ತು ಸ್ಥಳೀಯ ನ್ಯಾಯಾಲಯವು ಅದರ ಹೊರ ಗೋಡೆಗಳ ಮೇಲಿನ ವಿಗ್ರಹಗಳ ಮುಂದೆ ದೈನಂದಿನ ಪ್ರಾರ್ಥನೆಗೆ ಅನುಮತಿ ಕೋರಿ ಮಹಿಳೆಯರ ಗುಂಪಿನ ಮನವಿಯನ್ನು ಆಲಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News