ಬಿಜೆಪಿಯ ಬುಲ್ಡೋಝರ್ ನಿಂದ ದಿಲ್ಲಿಯಲ್ಲಿ 63 ಲಕ್ಷ ಜನರ ಮನೆ ಅಥವಾ ಅಂಗಡಿ ನೆಲಸಮವಾಗಬಹುದು: ಕೇಜ್ರಿವಾಲ್

Update: 2022-05-16 10:11 GMT

ಹೊಸದಿಲ್ಲಿ:  ದಿಲ್ಲಿಯಲ್ಲಿ ಜನರ ಅಂಗಡಿಗಳು ಹಾಗೂ  ಮನೆಗಳನ್ನು ಬಿಜೆಪಿ ಬುಲ್ಡೋಝರ್ ಮಾಡುತ್ತಿರುವ ರೀತಿ ಸರಿಯಲ್ಲ. ಇದು ಸ್ವತಂತ್ರ ಭಾರತದ ಅತಿದೊಡ್ಡ ವಿನಾಶ ಎಂದು ಕರೆದ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ , 63 ಲಕ್ಷ ಜನರಮನೆ ಅಥವಾ ಅಂಗಡಿ ನೆಲಸಮ ವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ದಿಲ್ಲಿ ಸಿಎಂ, "ದಿಲ್ಲಿಯಲ್ಲಿ  ಅತಿಕ್ರಮಣದ ವಿರುದ್ಧ ಎಂಸಿಡಿ ಬುಲ್ಡೋಝರ್‌ಗಳನ್ನು ಓಡಿಸುತ್ತಿದೆ. ಆದರೆ 2 ವಿಷಯಗಳು ಮುಖ್ಯವಾಗಿವೆ. ಒಂದು, ದಿಲ್ಲಿಯ 80 ಶೇ. ಅತಿಕ್ರಮಣಕ್ಕೆ ಒಳಪಡುತ್ತದೆ. ಎರಡನೆಯದಾಗಿ ಜನರು ತಮ್ಮ ಕಾಗದಪತ್ರಗಳನ್ನು ತೋರಿಸಿದ ನಂತರವೂ ಬುಲ್ಡೋಝರ್‌ಗಳನ್ನು ಓಡಿಸಲಾಗುತ್ತಿದೆ. ಇದು ಸರಿಯಲ್ಲ. ದಿಲ್ಲಿಯ ಗುಡಿಸಲು ಮತ್ತು ಕೊಳೆಗೇರಿಗಳನ್ನು ಒಡೆಯಲು ಬಿಜೆಪಿಯವರು ಯೋಜಿಸುತ್ತಿದ್ದಾರೆ'' ಎಂದು ಅರವಿಂದ ಕೇಜ್ರಿವಾಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News