ಮೇ 21: ಭಾರತ ಸಂವಿಧಾನ ವ್ಯಾಖ್ಯಾನ ಕಾರ್ಯಕ್ರಮ

Update: 2022-05-16 13:52 GMT

ಉಡುಪಿ : ’ಆಜಾದೀ ಕಾ ಅಮೃತ ವರ್ಷ’ ಸ್ವಾತಂತ್ರ್ಯ ಯೋಧರ ಸಂಸ್ಮರಣೆ-ಭಾರತ ಸಂವಿಧಾನ ವ್ಯಾಖ್ಯಾನ ಕಾರ್ಯಕ್ರಮವು ಅಜ್ಜರಕಾಡಿನ ಪುರಭವನದಲ್ಲಿ ಮೇ ೨೧ರಂದು ಸಂಜೆ ೪ಗಂಟೆಗೆ ನಡೆಯಲಿದೆ ಎಂದು ಸಂಘಟಕ ಡಾ.ಪಿ.ಅನಂತಕೃಷ್ಣ ಭಟ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಶಾಸಕ ರಘುಪತಿ ಭಟ್ ಉದ್ಘಾಟಿಸಲಿರುವರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉದ್ಯಮಿ ಬಾಲಾಜಿ ರಾಘವೇಂದ್ರ ಆಚಾರ್ಯ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ನಿವೃತ್ತ ಪ್ರಾಂಶುಪಾಲ ಪ್ರೊ.ರಾಧಾಕೃಷ್ಣ ಆಚಾರ್ಯ, ಕೋಟ ಗೀತಾನಂದ ಫೌಂಡೇಶನ್ ಆನಂದ ಕುಂದರ್ ಮುಖ್ಯ ಅಥಿತಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಬಳಿಕ ದೇಶಭಕ್ತಿಗೀತೆ, ಸಂವಿಧಾನ ರಚನಾ ಸಭೆಯ ಮಹನೀಯರಿಗೆ ಪುಷ್ಪ ನಮನ, ನೃತ್ಯ, ವಿಶೇಷ ಉಪನ್ಯಾಸ, ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ಗಳು ನಡೆಯಲಿವೆ. ಸುದ್ದಿಗೋಷ್ಠಿಯಲ್ಲಿ ಪ್ರೊ.ಎಂ.ಎಲ್. ಸಾಮಗ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News