ಅಂಡಮಾನ್ ನತ್ತ ಸಾಗಿದ ನೈಋತ್ಯ ಮನ್ಸೂನ್

Update: 2022-05-16 17:27 GMT

ಚೆನ್ನೈ, ಮೇ 16: ನೈಋತ್ಯ ಮಾನ್ಸೂನ್ ಬಂಗಾಳದ ದಕ್ಷಿಣ ಕೊಲ್ಲಿಯ ಕೆಲವು ಭಾಗಗಳಲ್ಲಿ, ಅಂಡಮಾನ್ ನಿಕೋಬಾರ್ ದ್ವೀಪದ ಹೆಚ್ಚಿನ ಭಾಗಗಳಲ್ಲಿ ಹಾಗೂ ಅಂಡಮಾನ್ನ ಸಮುದ್ರದಲ್ಲಿ ಸೋಮವಾರ ಕೂಡ ಮುಂದುವರಿದಿದೆ ಎಂದು ಭಾರತದ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಈ ನಡುವೆ, ಕೇರಳದ ಐದು ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗಿದ್ದ ರೆಡ್ ಅಲರ್ಟ್ ಅನ್ನು ಹಿಂಪಡೆಯಲಾಗಿದೆ ಎಂದು ವರದಿಯಾಗಿದೆ.

ಆದರೆ, ಎರ್ನಾಕುಲಂ, ಇಡುಕ್ಕಿ, ತ್ರಿಶೂರ್, ಮಲಪ್ಪುರಂ, ಕೋಝಿಕ್ಕೋಡ್, ಕಣ್ಣೂರು ಹಾಗೂ ಕಾಸರಗೋಡು-ಈ ಏಳು ಜಿಲ್ಲೆಗಳಲ್ಲಿ ಆರಂಜ್ ಅಲರ್ಟ್ ಜಾರಿಗೊಳಿಸಲಾಗಿದೆ. ಉಷ್ಣ ಗಾಳಿಯಿಂದ ತತ್ತರಿಸುತ್ತಿರುವ ರಾಜ್ಯಗಳಿಗೆ ಮಾನ್ಸೂನ್ ಪರಿಹಾರ ನೀಡಿದೆ ಎಂದು ಹೇಳಿರುವ ಭಾರತೀಯ ಹವಾಮಾನ ಇಲಾಖೆ, ಉಷ್ಣ ಗಾಳಿ ಪರಿಸ್ಥಿತಿಯ ತೀವ್ರತೆಯು ಗಮನಾರ್ಹವಾಗಿ ಇಳಿಕೆಯಾಗುವ ಹಾಗೂ ಸೋಮವಾರದಿಂದ ವಾಯುವ್ಯ ಮತ್ತು ಮಧ್ಯ ಭಾರತದಲ್ಲಿ ಹಂಚಿಕೆಯಾಗುವ ಸಾಧ್ಯತೆ ಇದೆ ಎಂದು ಅದು ತಿಳಿಸಿದೆ.

ಮುಂದಿನ 24 ಗಂಟೆಗಳಲ್ಲಿ ವಾಯುವ್ಯ ಭಾರತದ ಹಲವು ಭಾಗಗಳಲ್ಲಿ ಹಾಗೂ ಕೇಂದ್ರ ಭಾರತದ ಹಲವು ಭಾಗಗಳಲ್ಲಿ ಮುಂದಿನ ಮೂರು ದಿನಗಳಲ್ಲಿ ಗರಿಷ್ಠ ಉಷ್ಣಾಂಶ 3ರಿಂದ 4 ಡಿಗ್ರಿ ಸೆಲ್ಸಿಯಸ್ಗೆ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಭಾರತದ ಹವಾಮಾನ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News