ಉತ್ತರಪ್ರದೇಶ: ನೂತನ ಮದ್ರಸಾಗಳಿಗೆ ಅನುದಾನ ಸ್ಥಗಿತ ಪ್ರಸ್ತಾವನೆಗೆ ಆದಿತ್ಯನಾಥ್ ಸರಕಾರ ಸಮ್ಮತಿ

Update: 2022-05-18 17:11 GMT

ಲಕ್ನೋ, ಮೇ 18: ಮದ್ರಸಾಗಳಲ್ಲಿ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಿದ ಕೆಲವೇ ದಿನಗಳ ಬಳಿಕ ಉತ್ತರಪ್ರದೇಶ ಸರಕಾರವು ರಾಜ್ಯದಲ್ಲಿ ನೂತನ ಮದ್ರಸಾಗಳನ್ನು ಅನುದಾನದ ಪಟ್ಟಿಯಿಂದ ಹೊರತುಪಡಿಸಿದೆ.

ಮಂಗಳವಾರ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಮೇ 12ರಂದು ಉತ್ತರಪ್ರದೇಶ ಮದ್ರಸಾ ಶಿಕ್ಷಣ ಮಂಡಳಿಯು, ಎಲ್ಲಾ ಮದ್ರಸಾಗಳಲ್ಲಿ ಬೆಳಗ್ಗೆ ತರಗತಿಗಳ ಆರಂಭಕ್ಕೆ ಮೊದಲು ರಾಷ್ಟ್ರಗೀತೆಯನ್ನು ಹಾಡುವಂತೆ ಆದೇಶಿಸಿದೆ.

ರಾಷ್ಟ್ರಗೀತೆ ಹಾಡಿದ ಬಳಿಕವಷ್ಟೇ ವಿದ್ಯಾರ್ಥಿಗಳಿಗೆ ಅಧ್ಯಯನ ನಡೆಸಬೇಕಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ರಾಜ್ಯದಲ್ಲಿ ಮದ್ರಸಾಗಳ ಅಭಿವೃದ್ದಿಗೆ ರಾಜ್ಯ ಸರಕಾರ ಬದ್ಧವಾಗಿದೆಯೆಂದು ಉ.ಪ್ರ. ಸಚಿವ ಡ್ಯಾನಿಶ್ ಆಝಾದ್ ತಿಳಿಸಿದ್ದಾರೆ. 2021ರ ರಾಜ್ಯ ಬಜೆಟ್ನಲ್ಲಿ ಉತ್ತರಪ್ರದೇಶ ಸರಕಾರವು ಮದ್ರಸಾಗಳ ಅಧುನೀಕರಣಕ್ಕಾಗಿ 479 ಕೋಟಿ ರೂ.ಗಳನ್ನು ಅನುದಾನವಾಗಿ ನೀಡಿದೆ. ದತ್ತಾಂಶಗಳ ಪ್ರಕಾರ ಉತ್ತರಪ್ರದೇಶದಲ್ಲಿ 16 ಸಾವಿರ ನೋಂದಾಯಿತ ಮದ್ರಸಾಗಳಿದ್ದು, ಆ ಪೈಕಿ 558 ಸರಕಾರಿ ಅನುದಾನಿತ ಮದ್ರಸಾಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News