ಭಯೋತ್ಪಾದನೆಗೆ ಹಣಕಾಸು ನೆರವು ಪ್ರಕರಣ: ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ದೋಷಿ
Update: 2022-05-19 13:24 IST
ಹೊಸದಿಲ್ಲಿ: ಭಯೋತ್ಪಾದನೆಗೆ ಹಣಕಾಸು ನೆರವು ಪ್ರಕರಣದಲ್ಲಿ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ಅವರನ್ನು ಇಂದು ದಿಲ್ಲಿ ನ್ಯಾಯಾಲಯ ದೋಷಿ ಎಂದು ಘೋಷಿಸಿದೆ. ಕಠಿಣ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಸೇರಿದಂತೆ ಎಲ್ಲಾ ಆರೋಪಗಳಿಗೆ ಮಲಿಕ್ ಕಳೆದ ಮಂಗಳವಾರ ತಪ್ಪೊಪ್ಪಿಕೊಂಡ ನಂತರ ನ್ಯಾಯಾಲಯ ಈ ಘೋಷಣೆ ಮಾಡಿದೆ.
ನ್ಯಾಯಾಲಯವು ಯಾಸಿನ್ ಮಲಿಕ್ ಅವರ ಹಣಕಾಸಿನ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಅಫಿಡವಿಟ್ ಕೇಳಿದೆ ಮತ್ತು ವಿಧಿಸಬೇಕಾದ ದಂಡದ ಮೊತ್ತವನ್ನು ನಿರ್ಧರಿಸಲು ಪ್ರತ್ಯೇಕತಾವಾದಿ ನಾಯಕನ ಆರ್ಥಿಕ ಪರಿಸ್ಥಿತಿಯನ್ನು ನಿರ್ಣಯಿಸಲು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ ಐಎ) ನಿರ್ದೇಶಿಸಿದೆ.
ನ್ಯಾಯಾಲಯವು ಮೇ 25 ರಂದು ಶಿಕ್ಷೆಯ ಪ್ರಮಾಣದ ವಾದವನ್ನು ಆಲಿಸಲಿದೆ.