ಬಾಕ್ಸಿಂಗ್ ಮಾಡುತ್ತಿದ್ದಾಗಲೇ ಹೃದಯಾಘಾತದಿಂದ ನಿಧನರಾದ ಜರ್ಮನಿ ಚಾಂಪಿಯನ್ ಮೂಸಾ ಯಮಕ್

Update: 2022-05-19 13:53 GMT
Photo:twitter

ಬರ್ಲಿನ್:  ಜರ್ಮನಿ  ಚಾಂಪಿಯನ್ ಮೂಸಾ ಯಮಕ್ ಬಾಕ್ಸಿಂಗ್ ಮಾಡುತ್ತಿದ್ದಾಗಲೇ ಹೃದಯಾಘಾತದಿಂದ ನಿಧನರಾಗಿದ್ದು, ಬಾಕ್ಸಿಂಗ್ ಜಗತ್ತು ಮತ್ತೊಬ್ಬ ತಾರೆಯನ್ನು ಕಳೆದುಕೊಂಡಿದೆ.

 38ರ ಹರೆಯದ ಯಮಕ್  ಶನಿವಾರ ಮ್ಯೂನಿಚ್‌ನಲ್ಲಿ ಉಗಾಂಡಾದ ಹಮ್ಝಾ ವಂಡೆರಾ ಅವರನ್ನು ಎದುರಿಸುವಾಗ ರಿಂಗ್‌ನಲ್ಲಿ ಕುಸಿದು  ಬಿದ್ದರು ಎಂದು ‘ನ್ಯೂಯಾರ್ಕ್ ಪೋಸ್ಟ್’ ವರದಿ ಮಾಡಿದೆ.

"ಯುರೋಪಿಯನ್ ಹಾಗೂ  ಏಷ್ಯನ್ ಚಾಂಪಿಯನ್‌ಶಿಪ್‌ಗಳನ್ನು ಜಯಿಸಿರುವ ಅಲುಕ್ರಾದ ಬಾಕ್ಸರ್, ನಮ್ಮ ದೇಶವಾಸಿ ಮೂಸಾ ಅಸ್ಕಾನ್ ಯಮಕ್ ಅವರನ್ನು ನಾವು ಚಿಕ್ಕ ವಯಸ್ಸಿನಲ್ಲಿಯೇ ಕಳೆದುಕೊಂಡಿದ್ದೇವೆ" ಎಂದು ಟರ್ಕಿಯ ಅಧಿಕಾರಿ ಹಸನ್ ತುರಾನ್ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ಪ್ರೇಕ್ಷಕರಿಗಾಗಿ ಬಾಕ್ಸಿಂಗ್ ಸ್ಪರ್ಧೆಯನ್ನು  ನೇರಪ್ರಸಾರ ಮಾಡಲಾಯಿತು.

ಪಂದ್ಯದ ಮೂರನೇ ಸುತ್ತು ಆರಂಭವಾಗುವ ಮುನ್ನವೇ ಫೈಟರ್ ಕುಸಿದುಬಿದ್ದರು. ಯಮಕ್ ಎರಡನೇ ಸುತ್ತಿನಲ್ಲಿ ವಂಡೆರಾ ಅವರಿಂದ ದೊಡ್ಡ ಪಂಚ್  ಪಡೆದಿದ್ದರು.  ನಂತರ ಅವರು ಎಡವಿದರು. ಯಮಕ್ ಮೂರನೇ ಸುತ್ತಿನಲ್ಲಿ ಮತ್ತೆ ವಾಂಡೆರಾ ಅವರನ್ನು ಎದುರಿಸಲು ಬಂದರು, ಆದರೆ 3ನೇ ಸುತ್ತು ಆರಂಭವಾಗುವ ಮೊದಲೇ ಕುಸಿದರು ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ತಿಳಿಸಿದೆ.

ಯಮಕ್ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.

ಜರ್ಮನ್ ಬಾಕ್ಸರ್ ಯಮಕ್  ಅಜೇಯರಾಗಿದ್ದರು ಹಾಗೂ  8-0 ದಾಖಲೆಯನ್ನು ಹೊಂದಿದ್ದರು, ಅವರ ಎಲ್ಲಾ ಗೆಲುವುಗಳು ನಾಕೌಟ್ ಮೂಲಕ ಬಂದವು.

ಟರ್ಕಿಯಲ್ಲಿ ಜನಿಸಿದ ಯಮಕ್ 2017 ರಲ್ಲಿ ವೃತ್ತಿಪರ ಬಾಕ್ಸರ್ ಆದರು, ಆದರೆ 2021 ರಲ್ಲಿ WBFed ಇಂಟರ್ನ್ಯಾಷನಲ್ ಪ್ರಶಸ್ತಿಯನ್ನು ಗೆದ್ದ ನಂತರ ಜನಪ್ರಿಯತೆಯನ್ನು ಗಳಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News