ಬಾಡಿಗಾರ್ಡ್‌ಗಳಿಲ್ಲದೇ ನ್ಯಾನೋ ಕಾರಿನಲ್ಲಿ ತಾಜ್‌ ಹೋಟೆಲ್‌ ಗೆ ಬಂದಿಳಿದ ರತನ್‌ ಟಾಟಾ: ಸರಳತೆಗೆ ನೆಟ್ಟಿಗರ ಮೆಚ್ಚುಗೆ

Update: 2022-05-19 10:44 GMT
Photo: Twitter

ಮುಂಬೈ: ಇತರ ಎಲ್ಲ ಬಹುಕೋಟಿ ಉದ್ಯಮಿಗಳಿಗಿಂತ ಮಿಗಿಲಾದ ಸ್ವಭಾವದಿಂದ ಟಾಟಾ ಸಮೂಹ ಸಂಸ್ಥೆಗಳ ಮಾಲಕ ರತನ್‌ ಟಾಟಾ ಹಲವು ಬಾರಿ ಗಮನ ಸೆಳೆದಿದ್ದಾರೆ. ತಮ್ಮ ವಿನಯತೆ ಮತ್ತು ಸರಳ ಸ್ವಭಾವದಿಂದ ಅವರು ದೇಶಾದ್ಯಂತ ವರ್ಚಸ್ಸು ಸೃಷ್ಟಿಸಿದ್ದಾರೆ. ಇದೀಗ ರತನ್‌ ಟಾಟಾರ ಸರಳತೆಗೆ ಮಾದರಿಯಾದ ವೀಡಿಯೊವೊಂದು ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿದೆ.

ಬುಧವಾರ ಮುಂಬೈನಲ್ಲಿರುವ ತಮ್ಮದೇ ಒಡೆತನದ ತಾಜ್‌ ಹೋಟೆಲ್‌ ಗೆ ರತನ್‌ ಟಾಟಾ ಸಾಮಾನ್ಯರಂತೆ ಆಗಮಿಸಿದಾಗ ನೆರೆದಿದ್ದವರು ಅಚ್ಚರಿಪಟ್ಟಿದ್ದರು. ತಮ್ಮದೇ ಸಂಸ್ಥೆಯ ಬಜೆಟ್‌ ಕಾರು ಆಗಿರುವ ಟಾಟಾ ನ್ಯಾನೋದ ಮುಂದಿನ ಸೀಟಿನಲ್ಲಿ ಕುಳಿತು ಯಾವುದೇ ಸೆಕ್ಯೂರಿಟಿ ಗಾರ್ಡ್‌ ಗಳ ಹಂಗಿಲ್ಲದೇ ತಾಜ್‌ ಹೋಟೆಲ್‌ ಆವರಣದಲ್ಲಿ ಅವರು ಬಂದಿಳಿದ ವೀಡಿಯೊ ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿದೆ. ವರು ಕಾರಿನಿಂದ ಇಳಿದ ಕೂಡಲೇ ಹೋಟೆಲ್‌ ಸಿಬ್ಬಂದಿ ಅವರನ್ನು ಸುತ್ತುವರಿದು ಭದ್ರತೆ ಒದಗಿಸಿದರು. ಸಾಮಾಜಿಕ ತಾಣದಲ್ಲಿ ಈ ವೀಡಿಯೊ ವೈರಲ್‌ ಆಗಿದ್ದು, ಹಲವು ಬಳಕೆದಾರರು ರತನ್‌ ಟಾಟಾ ಸರಳತೆಯನ್ನು ಪ್ರಶಂಸಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News