"ನರೇಂದ್ರ ಮೋದಿ ಆಡಳಿತಕ್ಕಿಂತ ಮುಂಚೆ ಭಾರತ ರಕ್ಷಣಾ ನೀತಿಯನ್ನು ಹೊಂದಿರಲಿಲ್ಲ": ಅಮಿತ್‌ ಶಾ

Update: 2022-05-19 12:28 GMT

ಹೊಸದಿಲ್ಲಿ: "ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುವ ಮೊದಲು ಭಾರತವು ರಕ್ಷಣಾ ನೀತಿಯನ್ನು ಹೊಂದಿರಲಿಲ್ಲ ಮತ್ತು ಅದು ಅಸ್ತಿತ್ವದಲ್ಲಿದ್ದರೂ ಸಹ ಅದು ವಿದೇಶಾಂಗ ನೀತಿಯ ನೆರಳು ಮಾತ್ರ" ಎಂದು ಭಾರತದ ಕೇಂದ್ರ ಗೃಹಸಚಿವ ಅಮಿತ್‌ ಶಾ ಹೇಳಿಕೆ ನೀಡಿದ್ದಾರೆ. ದಿಲ್ಲಿ ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿರುವ ಮೂರು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನದ ಮೊದಲ ಅಧಿವೇಶನದಲ್ಲಿ "ಸ್ವರಾಜ್ಯದಿಂದ ನವಭಾರತದವರೆಗಿನ ಭಾರತದ ಕಲ್ಪನೆಗಳನ್ನು ಮರುಪರಿಶೀಲಿಸುವುದು" ಎಂಬ ವಿಚಾರದ ಕುರಿತು ಅವರು ಮಾತನಾಡುತ್ತಿದ್ದರು.

ಭಯೋತ್ಪಾದನಾ ವಿರೋಧಿ ಸರ್ಜಿಕಲ್ ಸ್ಟ್ರೈಕ್ ಮತ್ತು ವೈಮಾನಿಕ ದಾಳಿಯನ್ನು ಉಲ್ಲೇಖಿಸಿದ ಸಚಿವರು, ಈ ಕ್ರಮಗಳು ಭಾರತದ ರಕ್ಷಣಾ ನೀತಿಯ ಅರ್ಥವನ್ನು ತೋರಿಸುತ್ತವೆ ಎಂದು ಹೇಳಿದರು. "ಹಿಂದೆ, ನಮ್ಮ ಮೇಲೆ ದಾಳಿ ಮಾಡಲು ಭಯೋತ್ಪಾದಕರನ್ನು ಕಳುಹಿಸಲಾಗುತ್ತಿತ್ತು. ಉರಿ ಮತ್ತು ಪುಲ್ವಾಮಾ ದಾಳಿಯಲ್ಲೂ ಅದೇ ರೀತಿಯ ಪ್ರಯತ್ನಗಳು ನಡೆದವು. ಆದರೆ ಸರ್ಜಿಕಲ್ ಸ್ಟ್ರೈಕ್ ಮತ್ತು ವೈಮಾನಿಕ ದಾಳಿಯ ಮೂಲಕ ನಾವು ರಕ್ಷಣಾ ನೀತಿಯ ಅರ್ಥವನ್ನು ತೋರಿಸಿದ್ದೇವೆ" ಎಂದು ಅವರು ಹೇಳಿದರು.

"ವಿಶ್ವವಿದ್ಯಾನಿಲಯಗಳು ಸೈದ್ಧಾಂತಿಕ ಪೈಪೋಟಿಯ ಸ್ಥಳಗಳಾಗುವುದಕ್ಕಿಂತ ವಿಚಾರ ವಿನಿಮಯಕ್ಕಿರುವ ವೇದಿಕೆಯಾಗಬೇಕು" ಎಂದು ಶಾ ಹೇಳಿದರು. ಒಂದು ಸಿದ್ಧಾಂತವು ಸಂಘರ್ಷಕ್ಕೆ ಕಾರಣವಾಗಿದ್ದರೆ, ಅದು "ಸಿದ್ಧಾಂತವಲ್ಲ" ಮತ್ತು "ಖಂಡಿತವಾಗಿಯೂ ಭಾರತದ ಸಿದ್ಧಾಂತವಲ್ಲ" ಎಂದೂ ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News