ಬೈಂದೂರು: ಯುವತಿ ನಾಪತ್ತೆ

Update: 2022-05-19 16:27 GMT
 ರೇಣುಕಾ

ಉಡುಪಿ :  ಬೈಂದೂರು ತಾಲೂಕು ಮುದೂರು ಗ್ರಾಮದ ಹಾರ್ಕಿ ನಿವಾಸಿ ರೇಣುಕಾ (24) ಎಂಬ ಯುವತಿ ಮೇ 17ರಂದು ಸಂಜೆ 4 ಗಂಟೆ ಸುಮಾರಿಗೆ ಮುದೂರು ಪೇಟೆಯಿಂದ ಟೈಲರಿಂಗ್ ಬಟ್ಟೆ ತರಲು ಹೋದವರು ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ. 

5 ಅಡಿ ಎತ್ತರ, ಉರುಟು ಮುಖ, ಬಿಳಿ ಮೈಬಣ್ಣ, ಸಪೂರ ಶರೀರ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕೊಲ್ಲೂರು ಪೊಲೀಸ್ ಠಾಣೆ ದೂ.ಸಂಖ್ಯೆ: ೦೮೨೫೪-೨೫೮೨೩೩, ಮೊ.ನಂ: ೯೪೮೦೮೦೫೪೬೦, ಬೈಂದೂರು ವೃತ್ತ ನಿರೀಕ್ಷಕರ ಕಚೇರಿ ದೂ.ಸಂಖ್ಯೆ: ೦೮೨೫೪-೨೫೧೦೩೧, ಮೊ.ನಂ: ೯೪೮೦೮೦೫೪೩೪, ಕಂಟ್ರೋಲ್ ರೂಂ ೧೦೦, ೦೮೨೦-೨೫೨೬೪೪೪ ಅನ್ನು ಸಂಪರ್ಕಿಸಬಹುದು ಎಂದು ಕೊಲ್ಲೂರು ಪೊಲೀಸ್ ಠಾಣೆಯ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News