ಉದ್ಯಾವರ ಎಂಇಟಿ ಸ್ಕೂಲ್‌ಗೆ ಶೇ.100 ಫಲಿತಾಂಶ
Update: 2022-05-19 22:22 IST
ಉಡುಪಿ : ಉದ್ಯಾವರ ಎಂಇಟಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ೨೦೨೧-೨೨ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ಪಬ್ಲಿಕ್ ಪರೀಕ್ಷೆ ಯಲ್ಲಿ ಶೇ.100 ಫಲಿತಾಂಶ ಪಡೆದಿದೆ.
ಒಟ್ಟು 25 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅದರಲ್ಲಿ ೧೪ ವಿದ್ಯಾರ್ಥಿ ಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣ ಹೊಂದಿದ್ದಾರೆ. ಮುಹಮ್ಮದ್ ಇರ್ಫಾನ್ ೬೦೬(ಶೇ.೯೬.೯೬), ಆಯಿಷಾ ಭಾನು ೬೦೧(೯೬.೧೬) ಅಪ್ಸಾ ಬಾನು ೫೯೯ (ಶೇ.೯೫.೮೪), ಹಾನಿ ಅಫ್ಶಾನ್ ನವಾಝ್ ೫೯೪ (ಶೇ.೯೫.೦೪), ಮುಹಮ್ಮದ್ ನುಮನ್ ಶೇಕ್ ೫೯೩(ಶೇ.೯೪.೮೮) ಅಂಕ ಪಡೆದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.