ಮೇ 23ರಿಂದ ಯಕ್ಷಗಾನ ಕಲಾರಂಗದ ತಾಳಮದ್ದಲೆ ಸಪ್ತಾಹ

Update: 2022-05-20 16:16 GMT

ಉಡುಪಿ, ಮೇ ೨೦: ಉಡುಪಿಯ ಯಕ್ಷಗಾನ ಕಲಾರಂಗ ಎರಡು ದಶಕಗಳಿಂದ ನಡೆಸಿಕೊಂಡು ಬಂದಿರುವ ತಾಳಮದ್ದಲೆ ಸಪ್ತಾಹ ಇದೇ ಮೇ ೨೩ರಿಂದ ೨೯ರವರೆಗೆ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ.

ತಾಳಮದ್ದಲೆ ಸಪ್ತಾಹವನ್ನು ೨೩ರ ಸೋಮವಾರ ಸಂಜೆ ೫:೦೦ ಗಂಟೆಗೆ ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿದ್ವಾನ್ ಕೆ. ಪಿ. ಶ್ರೀನಿವಾಸ ತಂತ್ರಿ, ಪಿ.ನಿತ್ಯಾನಂದ ರಾವ್, ಸಂಕಬೈಲು ಸತೀಶ ಅಡಪ, ಕರುಣಾಕರ್ ಸಾಲಿಯಾನ್ ಭಾಗವಹಿಸಲಿದ್ದಾರೆ. 

ಉತ್ತರ ರಾಮಾಯಣ ಶೀರ್ಷಿಕೆಯಲ್ಲಿ ಪ್ರತಿದಿನ ಸಂಜೆ ೫:೩೦ರಿಂದ ೮:೩೦ರ ವರೆಗೆ ಅನುಕ್ರಮವಾಗಿ ಅಗ್ನಿಪರೀಕ್ಷೆ, ಶ್ರೀರಾಮ ನಿಜಪಟ್ಟಾಭಿಷೇಕ, ಸೀತಾ ಪರಿತ್ಯಾಗ, ಲವಣಾಸುರ ಕಾಳಗ, ವೀರಮಣಿ ಕಾಳಗ, ಲವ-ಕುಶ ಕಾಳಗ, ಶ್ರೀರಾಮ ನಿರ್ಯಾಣ ತಾಳಮದ್ದಲೆ ನಡೆಯಲಿದೆ. ಮೇ ೨೯ರ ರವಿವಾರ ಸಮಾರೋಪ ಸಮಾರಂಭ ಹಾಗೂ ಪ್ರಶಸ್ತಿ ಪ್ರದಾನ ನಡೆಯಲಿದ್ದು, ತಾಳಮದ್ದಲೆ ಅಪರಾಹ್ನ ೨:೦೦ಕ್ಕೆ ಪ್ರಾರಂಭಗೊಳ್ಳಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News