ಚೀನಾಕ್ಕೆ ಭೇಟಿ ನೀಡಲಿರುವ ವಿಶ್ವಸಂಸ್ಥೆ ಮಾನವಹಕ್ಕುಗಳ ಮುಖ್ಯಸ್ಥೆ

Update: 2022-05-20 18:30 GMT

ಜಿನೆವಾ, ಮೇ 20: ವಿಶ್ವಸಂಸ್ಥೆಯ ಮಾನವಹಕ್ಕುಗಳ ಸಮಿತಿ ಮುಖ್ಯಸ್ಥೆ ಮಿಚೆಲ್ ಬಚಿಲೆಟ್ ಮುಂದಿನ ವಾರ ಚೀನಾಕ್ಕೆ ಭೇಟಿ ನೀಡಲಿದ್ದಾರೆ ಎಂದು ಅವರ ಕಚೇರಿಯ ಹೇಳಿಕೆ ತಿಳಿಸಿದೆ.ಮಿಚೆಲ್ ಬಚಿಲೆಟ್ ಅವರ ಬಹುನಿರೀಕ್ಷಿತ ಚೀನಾ ಭೇಟಿ ಸೋಮವಾರ ಆರಂಭಗೊಳ್ಳಲಿದೆ. ಚೀನಾ ಸರಕಾರದ ಆಹ್ವಾನದ ಮೇರೆಗೆ ಅವರು ಚೀನಾಕ್ಕೆ 6 ದಿನಗಳ ಅಧಿಕೃತ ಭೇಟಿ ನೀಡಲಿದ್ದು ಈ ಸಂದರ್ಭ ಗ್ವಾಂಗ್ಝೋವ್, ಕಶ್ಗರ್ ಮತ್ತು ಕ್ಸಿನ್ಜಿಯಾಂಗ್ ಪ್ರಾಂತದ ಉರುಂಖಿ ನಗರಗಳಿಗೆ ಭೇಟಿ ನೀಡಲಿದ್ದಾರೆ ಎಂದು ಹೇಳಿಕೆ ತಿಳಿಸಿದೆ.ಕ್ಸಿನ್ಜಿಯಾಂಗ್ ಪ್ರಾಂತದಲ್ಲಿನ ಅಧಿಕಾರಿಗಳ ವಿರುದ್ಧ ಮಾನವ ಹಕ್ಕುಗಳ ವ್ಯಾಪಕ ಉಲ್ಲಂಘನೆಯ ಆರೋಪ ಕೇಳಿಬಂದಿರುವುದರಿಂದ ಈ ಭೇಟಿಗೆ ಮಹತ್ವವಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News