ಜಸ್ಟಿಸ್‌ ಝಾಕ ಅಝೀಝುಲ್‌ ಹಕ್‌ ರನ್ನು ಹಿರಿಯ ವಕೀಲರಾಗಿ ನೇಮಿಸಿದ ಸುಪ್ರೀಂಕೋರ್ಟ್‌

Update: 2022-05-21 15:22 GMT

ಹೊಸದಿಲ್ಲಿ: ಬಾಂಬೆ ಹೈಕೋರ್ಟ್‌ ನ ಮಾಜಿ ನ್ಯಾಯಾಧೀಶರಾದ ಜಸ್ಟಿಸ್‌ ಝಾಕ ಅಝೀಝುಲ್‌ ಹಕ್‌ ರನ್ನು ಸುಪ್ರೀಂಕೋರ್ಟ್‌ ಹಿರಿಯ ವಕೀಲರನ್ನಾಗಿ ನೇಮಕ ಮಾಡಲಾಗಿದೆ ಎಂದು livelaw ವರದಿ ಮಾಡಿದೆ. 

ಮಹಾರಾಷ್ಟ್ರದ ಅಕೋಲಾದಲ್ಲಿ ಹುಟ್ಟಿದ ಹಕ್‌ ತಮ್ಮ ಪ್ರಾಥಮಿಕ ಮತ್ತು ಉನ್ನತ ವಿದ್ಯಾಭ್ಯಾಸವನ್ನು ಅಕೋಲಾದಲ್ಲಿಯೇ ಪೂರೈಸಿದರು. ಮೊದಲು ಬಿಎಸ್ಸಿ ಪದವಿ ಪೂರ್ಣಗೊಳಿಸಿದ್ದ ಅವರು ಬಳಿಕ ತಮ್ಮ ಹುಟ್ಟೂರಿನಲ್ಲೇ ಕಾನೂನು ಪದವಿ ಪೂರ್ಣಗೊಳಿಸಿದ್ದರು. ಜನವರಿ 1985ರಲ್ಲಿ ಮಹಾರಾಷ್ಟ್ರ ಮತ್ತು ಗೋವಾ ಬಾರ್‌ ಕೌನ್ಸಿಲ್‌ ನಲ್ಲಿ ತಮ್ಮ ವಕೀಲಿಕೆ ಪ್ರಾರಂಭಿಸಿದರು. ತನ್ನ ತಂದೆ ಮುಹಮ್ಮದ್‌ ಅಝೀಝುಲ್‌ ಹಕ್‌ ರೊಂದಿಗೆ ತರಬೇತಿ ಆರಂಭಿಸಿದ್ದರು. ಹೆಚ್ಚುವರಿ ಸ್ಥಾಯಿ ಸಲಹೆಗಾರರಾಗಿ ಯೂನಿಯನ್ ಆಫ್ ಇಂಡಿಯಾವನ್ನು ಪ್ರತಿನಿಧಿಸಿದ್ದು, ‘ಎ’ ಪ್ಯಾನಲ್ ಕೌನ್ಸಿಲ್ ಆಗಿ ಮಹಾರಾಷ್ಟ್ರ ಸರ್ಕಾರವನ್ನು ಪ್ರತಿನಿಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News