ತಮ್ಮ ಫ್ಲಾಟ್ ಅನ್ನು 'ಗ್ಯಾಸ್ ಚೇಂಬರ್' ಆಗಿ ಪರಿವರ್ತಿಸಿ ಉಸಿರುಗಟ್ಟಿ ಮೃತಪಟ್ಟ ಮಹಿಳೆ, ಇಬ್ಬರು ಪುತ್ರಿಯರು!

Update: 2022-05-22 07:59 GMT

ಹೊಸದಿಲ್ಲಿ: 50ರ ಹರೆಯದ ಮಹಿಳೆ ಹಾಗೂ  ಆಕೆಯ ಇಬ್ಬರು ಪುತ್ರಿಯರು ತಮ್ಮ ದಕ್ಷಿಣ ದಿಲ್ಲಿಯ ಫ್ಲಾಟ್ ಅನ್ನು ಗ್ಯಾಸ್ ಚೇಂಬರ್ ಆಗಿ ಪರಿವರ್ತಿಸಿ ಉಸಿರುಗಟ್ಟಿ ಸಾವನ್ನಪ್ಪಿರುವ ಆಘಾತಕಾರಿ ಪ್ರಕರಣವನ್ನು  ದಿಲ್ಲಿ ಪೊಲೀಸರು ಪತ್ತೆ ಮಾಡಿದ್ದಾರೆ.

ಘಟನೆ ನಡೆದ ವಸಂತ್ ವಿಹಾರದ ಫ್ಲಾಟ್‌ನಿಂದ ಆತ್ಮಹತ್ಯೆ ಟಿಪ್ಪಣಿಗಳನ್ನು ವಶಪಡಿಸಿಕೊಳ್ಳಲಾಗಿದೆ.  ಇದೊಂದು ಯೋಜಿತ ಆತ್ಮಹತ್ಯೆ ಪ್ರಕರಣ ಎಂದು ತಿಳಿದುಬಂದಿದೆ.

ಎಲ್ಲಾ ಬಾಗಿಲುಗಳು, ಕಿಟಕಿಗಳು ಮತ್ತು ವೆಂಟಿಲೇಟರ್‌ಗಳನ್ನು ಪಾಲಿಥಿನ್‌ನಿಂದ ಪ್ಯಾಕ್ ಮಾಡಲಾಗಿತ್ತು, ಅಡುಗೆ ಅನಿಲ ಸಿಲಿಂಡರ್‌ನ ಬಟನ್  ಆನ್ ಮಾಡಲಾಗಿದೆ ಹಾಗೂ  ಕಲ್ಲಿದ್ದಲು ಬೆಂಕಿ ಉರಿಯುತ್ತಿತ್ತು. ಇದು ಕೋಣೆಯಲ್ಲಿ ವಿಷಕಾರಿ ಕಾರ್ಬನ್ ಮಾನಾಕ್ಸೈಡ್   ಉಂಟಾಗಲು ಕಾರಣವಾಗಿ  ಮೂವರನ್ನು ಬಲಿ ಪಡೆದಿದೆ.

ಪೊಲೀಸರು ಫ್ಲಾಟ್‌ಗೆ ಪ್ರವೇಶಿಸಿದಾಗ ಒಂದು ಮಲಗುವ ಕೋಣೆಯಲ್ಲಿ ಮೂರು ಶವಗಳು, ಅವುಗಳ ಪಕ್ಕದಲ್ಲಿ ಕಲ್ಲಿದ್ದಲಿನ ಬೆಂಕಿ ಉರಿಯುತ್ತಿರುವುದು ಕಂಡುಬಂದಿದೆ.

ಒಂದು ಆತ್ಮಹತ್ಯಾ ಟಿಪ್ಪಣಿಯಲ್ಲಿ, ಫ್ಲಾಟ್‌ಗೆ ಪ್ರವೇಶಿಸುವವರು ಬೆಂಕಿಯ ಕಿಡಿಯನ್ನು ಹೊತ್ತಿಸಬಾರದು ಎಂಬ ಸ್ಪಷ್ಟ ಸೂಚನೆ ಇತ್ತು.

"ತುಂಬಾ ಮಾರಣಾಂತಿಕ ಅನಿಲ... ಒಳಗೆ ಕಾರ್ಬನ್ ಮಾನಾಕ್ಸೈಡ್ ಇದೆ . ಇದು ಹೊತ್ತಿಉರಿಯುತ್ತದೆ. ದಯವಿಟ್ಟು ಕಿಟಕಿ ತೆರೆದು ಫ್ಯಾನ್ ಆನ್ ಮಾಡುವ ಮೂಲಕ ಕೊಠಡಿಯನ್ನು ಓಪನ್ ಮಾಡಿ. ಬೆಂಕಿಕಡ್ಡಿ, ಕ್ಯಾಂಡಲ್ ಅಥವಾ ಯಾವುದನ್ನಾದರೂ ಬೆಳಗಿಸಬೇಡಿ !! ಪರದೆಯನ್ನು ತೆಗೆಯುವಾಗ ಜಾಗರೂಕರಾಗಿರಿ.  ಏಕೆಂದರೆ ಕೊಠಡಿ ಅಪಾಯಕಾರಿ ಗ್ಯಾಸ್ ನಿಂದ ತುಂಬಿದೆ. ಉಸಿರಾಡದಿರಿ" ಎಂದು ಇಂಗ್ಲಿಷ್‌ನಲ್ಲಿ  ಸೂಸೈಡ್ ನೋಟ್ ಬರೆಯಲಾಗಿದೆ.

ಮೃತಪಟ್ಟ ಮಹಿಳೆಯನ್ನು ಮಂಜು ಹಾಗೂ  ಆಕೆಯ ಪುತ್ರಿಯರಾದ ಅಂಶಿಕಾ ಮತ್ತು ಅಂಕು ಎಂದು ಗುರುತಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News