ಮುಂಬೈ: ನಿಷೇಧಿತ ಮಾದಕವಸ್ತು ಹೊಂದಿರುವ ಕೆಮ್ಮಿನ ಸಿರಪ್‌ ಬಾಟಲಿಗಳನ್ನು ವಶಪಡಿಸಿಕೊಂಡ ಎನ್ ಸಿಬಿ

Update: 2022-05-22 07:52 GMT
Photo: NDTV

ಮುಂಬೈ: ಎನ್‌ಸಿಬಿ ಮುಂಬೈ ಘಟಕವು ನೆರೆಯ ಥಾಣೆ ಜಿಲ್ಲೆಯಿಂದ ಕೊಡೈನ್, ನಿಷೇಧಿತ ಮಾದಕವಸ್ತು ಹೊಂದಿರುವ ಕೆಮ್ಮಿನ ಸಿರಪ್‌ನ 8,640 ಬಾಟಲಿಗಳನ್ನು ವಶಪಡಿಸಿಕೊಂಡಿದೆ . ಈ ಸಂಬಂಧ ಇಬ್ಬರನ್ನು ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ಇಂದು ತಿಳಿಸಿದ್ದಾರೆ.

ಮಾಹಿತಿಯ  ಮೇರೆಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ತಂಡವು ಶನಿವಾರ  ಥಾಣೆಯ ಭಿವಂಡಿ ಪಟ್ಟಣದ ಸಮೀಪ ಆಗ್ರಾ-ಮುಂಬೈ ಹೆದ್ದಾರಿಯಲ್ಲಿ ಕಾರನ್ನು ಅಡ್ಡಗಟ್ಟಿದೆ.

ಕಾರನ್ನು ಶೋಧಿಸುವ ವೇಳೆ ವಾಹನದಲ್ಲಿ 60 ಬಾಕ್ಸ್‌ಗಳಲ್ಲಿ ಒಟ್ಟು 864 ಕೆಜಿ ತೂಕದ ಕೊಡೈನ್ ಆಧಾರಿತ ಕೆಮ್ಮಿನ ಸಿರಪ್‌ನ 8,640 ಬಾಟಲಿಗಳು ಪತ್ತೆಯಾಗಿವೆ ಎಂದು ಎನ್‌ಸಿಬಿ ಅಧಿಕಾರಿ ತಿಳಿಸಿದ್ದಾರೆ.

ಕಾರು ಚಾಲಕನನ್ನು ಬಂಧಿಸಲಾಯಿತು ಹಾಗೂ ಆತ  ನೀಡಿದ ಮಾಹಿತಿಯ ಆಧಾರದ ಮೇಲೆ ಎನ್‌ಸಿಬಿ ಬಲೆ ಬೀಸಿತು ಮತ್ತು ಸರಕುಗಳನ್ನು ಸ್ವೀಕರಿಸಬೇಕಿದ್ದ ಇನ್ನೊಬ್ಬ ವ್ಯಕ್ತಿಯನ್ನು ಸುಮಾರು ಎರಡು ಕಿ.ಮೀ.ವರೆಗೆ ಆತನ  ದ್ವಿಚಕ್ರ ವಾಹನವನ್ನು ಬೆನ್ನಟ್ಟಿದ ನಂತರ ಹಿಡಿದಿದೆ ಎಂದು ಎನ್‌ಸಿಬಿ ಅಧಿಕಾರಿ ತಿಳಿಸಿದ್ದಾರೆ. ಎರಡು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News