ಎಸೆಸೆಲ್ಸಿ ಫಲಿತಾಂಶ : ಸೈಂಟ್ ಸಿಸಿಲೀಸ್ ಪ್ರೌಢ ಶಾಲೆಯ ವಿದ್ಯಾರ್ಥಿಗಳ ಉತ್ತಮ ಸಾಧನೆ

Update: 2022-05-22 15:52 GMT

ಉಡುಪಿ : ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉಡುಪಿ ಸೈಂಟ್ ಸಿಸಿಲೀಸ್ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಶಾಲೆಯಲ್ಲಿ ಒಟ್ಟು ೧೬೮ ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಶೇ.೯೩.೪೫ ಫಲಿತಾಂಶವನ್ನು ಪಡೆದಿದೆ.

೪೪ ಮಂದಿ ವಿದ್ಯಾರ್ಥಿಗಳು ಎ+ ಶ್ರೇಣಿ ಪಡೆದರೆ, ೪೮ ಮಂದಿ ಎ, ೨೭ ಮಂದಿ ಬಿ+, ೨೯ ಮಂದಿ ಬಿ ಹಾಗೂ ೯ ಮಂದಿ ಸಿ+ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಪ್ರಣತಿ ಉದಯಕುಮಾರ್ ೬೨೫ರಲ್ಲಿ ೬೨೩ ಅಂಕಗಳನ್ನು ಪಡೆಯುವ ಮೂಲಕ ಶಾಲೆಗೆ ಅಗ್ರಸ್ಥಾನಿ ಎನಿಸಿಕೊಂಡಿದ್ದಾರೆ. ಒಟ್ಟು ೧೭ ಮಂದಿ ವಿದ್ಯಾರ್ಥಿಗಳು ೬೦೦ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿದ್ದಾರೆ ಎಂದು ಶಾಲೆಯ ಪ್ರಕಟಣೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News