ಪೇಜಾವರ ಮಠದ ಗೆಸ್ಟ್‌ ಹೌಸ್‌ನಲ್ಲಿ ಕಳವು

Update: 2022-05-22 16:20 GMT

ಉಡುಪಿ : ನಗರದ ಕೃಷ್ಣ ಮಠದ ಬಳಿಯ ಪೇಜಾವರ ಅಧೋಕ್ಷಜ ಗೆಸ್ಟ್‌ ಹೌಸ್‌ನಲ್ಲಿ ಮೇ 17ರಂದು ರಾತ್ರಿ ನಗ ನಗದು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ಮುಂಬೈ ನಿವಾಸಿ ಶಾಂತಾ ಆಚಾರ್ಯ, ಉಡುಪಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದಕ್ಕಾಗಿ ಪೇಜಾವರ ಗೆಸ್ಟ್‌ ಹೌಸ್‌ನಲ್ಲಿ ಉಳಿದು ಕೊಂಡಿದ್ದು, ಈ ವೇಳೆ ರೂಮಿನ ಕಿಟಕಿ ಪಕ್ಕದಲ್ಲಿರುವ ಟೇಬಲ್ ಮೇಲೆ ಇರಿಸಿದ್ದ 10 ಗ್ರಾಂ ತೂಕದ ಚಿನ್ನದ ಕರಿಮಣಿ ಸರ ಮತ್ತು 10 ಸಾವಿರ ರೂ. ನಗದು ಇರುವ ಪರ್ಸ್  ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ.

ಕಳವಾದ ಸೊತ್ತುಗಳ ಒಟ್ಟು ಮೌಲ್ಯ 50 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News