"ಭಾರತ ಭೇಟಿ ಯಾವಾಗ?" : ಪ್ರಧಾನಿ ಮೋದಿಯ ಜಪಾನ್‌ ಭೇಟಿಯ ಫೋಟೊಗೆ ಸುಬ್ರಮಣಿಯನ್‌ ಸ್ವಾಮಿ ಕಾಮೆಂಟ್‌

Update: 2022-05-23 12:16 GMT

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರಕಾರದ ಕೆಲ ನೀತಿಗಳನ್ನು ವಿರೋಧಿಸಿ ಸದಾ ಹೇಳಿಕೆಗಳನ್ನು ನೀಡುವ ಹಿರಿಯ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ, ಪ್ರಧಾನಿ ನರೇಂದ್ರ ಮೋದಿಯ ಜಪಾನ್‌ ಭೇಟಿ ಕುರಿತ ಫೋಟೊ ಕೆಳಗೆ ವ್ಯಂಗ್ಯವಾಗಿ ಕಾಮೆಂಟ್‌ ಮಾಡಿದ್ದಾರೆ. ಹಲವಾರು ಮಂದಿ ಇದನ್ನು ಲೈಕ್‌ ಮಾಡಿದ್ದು, ಆಳ್ಟ್‌ ನ್ಯೂಸ್‌ ಸಹಸಂಸ್ಥಾಪಕ ಮುಹಮ್ಮದ್‌ ಝುಬೈರ್‌ "ಇದು ನಕಲಿ ಖಾತೆಯೇನಲ್ಲ" ಎಂದು ರಿಟ್ವೀಟ್‌ ಮಾಡಿದ್ದಾರೆ. 

ಎರಡು ದಿನಗಳ ಭೇಟಿಗಾಗಿ ಪ್ರಧಾನಿ ನರೇಂದ್ರ ಮೋದಿ ಜಪಾನ್‌ ಗೆ ಬಂದಿಳಿದ ಸುದ್ದಿ ಮತ್ತು ಫೋಟೊವನ್ನು ಎನ್ಡಿಟಿವಿ ಟ್ವಿಟರ್‌ ನಲ್ಲಿ ಪ್ರಕಟಿಸಿತ್ತು. ಈ ಪೋಸ್ಟ್‌ ಗೆ ಪ್ರತಿಕ್ರಿಯಿಸಿದ ಸುಬ್ರಮಣಿಯನ್‌ ಸ್ವಾಮಿ, "ಭಾರತಕ್ಕೆ ಮೋದಿಯ ಮುಂದಿನ ಭೇಟಿ ಯಾವಾಗ?" ಎಂದು ಕಿಚಾಯಿಸಿದ್ದಾರೆ. ಈ ಪ್ರತಿಕ್ರಿಯೆಗೆ 8 ಸಾವಿರಕ್ಕೂ ಹೆಚ್ಚು ಲೈಕ್‌ ಗಳು ಬಂದಿದ್ದು, ಹಲವು ಬಿಜೆಪಿ ಬೆಂಬಲಿಗರು ಸುಬ್ರಮಣಿಯನ್‌ ಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News