ಪಡುಬಿದ್ರಿ: ಸಾಂತೂರು ಪರಾಡಿ ಮೈಂದಕೆರೆ ಯೋಜನೆ; ಆರೋಪ

Update: 2022-05-23 17:43 GMT

ಪಡುಬಿದ್ರಿ: ಸುಮಾರು 1.30 ಕೋಟಿ ರೂಪಾಯಿ ವೆಚ್ಚದಲ್ಲಿ ಅದಾನಿ ಯುಪಿಸಿಎಲ್ ಸಿಎಸ್‍ಆರ್ ಯೋಜನೆಯಡಿ ನಿರ್ಮಿಸಿರುವ ಸಾಂತೂರು ಪರಾಡಿ ಮೈಂದಕೆರೆ ಯೋಜನೆಯಿಂದ ಕಳಪೆಯಾಗಿದೆ ಎಂದು ಮುದರಂಗಡಿ ಗ್ರಾಮ ಪಂಚಾಯಿತಿ ಪ್ರಭಾರ ಅಧ್ಯಕ್ಷ ಶರತ್ ಶೆಟ್ಟಿ ಸಾಂತೂರು ಆರೋಪಿಸಿದ್ದಾರೆ. 

ಈ ಬಗ್ಗೆ ಸೋಮವಾರ ಸ್ಥಳ ಪರಿಶೀಲನೆ ನಡೆಸಿ ಮಾಧ್ಯಮದ ಮುಂದೆ ವಿವರಿಸಿದ ಅವರು, 2019ರಲ್ಲಿ ಕೆರೆ ಅಭಿವೃದ್ಧಿಪಡಿಸುವ ಬಗ್ಗೆ ಯುಪಿಸಿಎಲ್ ಗ್ರಾಮ ಪಂಚಾಯಿತಿಗೆ ಪ್ರಸ್ತಾವನೆ ಸಲ್ಲಿಸಿತ್ತು. 4 ವರ್ಷ ನಿಧಾನಗತಿಯಲ್ಲಿ ಸಾಗಿದ ಅಪೂರ್ಣ ಕಾಮಗಾರಿಯನ್ನು ಏಪ್ರಿಲ್ ತಿಂಗಳಿನಲ್ಲಿ ಉದ್ಘಾಟಿಸಲು ಕಂಪೆನಿ ಪಂಚಾಯಿತಿಗೆ ಆಹ್ವಾನ ನೀಡಿತ್ತು. ಪರಿಶೀಲನೆ ನಡೆಸದೆ ಕಾಮಗಾರಿ ಉದ್ಘಾಟಿಸಲು ನಾವು ನಿರಾಕರಿಸಿದ್ದೆವು. ಕಳಪೆ ಕಾಮಗಾರಿ ಬಗ್ಗೆ ಪರಿಶೀಲನೆಗಾಗಿ ಕಂಪೆನಿಯವರನ್ನು ಎರಡೆರಡು ಬಾರಿ ಆಹ್ವಾನಿಸಿದರೂ, ಆಗಮಿಸಿದೆ ನುಣುಚಿಕೊಂಡಿದ್ದರು ಎಂದು ದೂರಿದರು.

1.5 ಕೋಟಿ ರೂ ವೆಚ್ಚದ ಕಾಮಗಾರಿಯಲ್ಲಿ ವಾಕಿಂಗ್ ಟ್ರ್ಯಾಕ್, ಉದ್ಯಾನವನ, ಕುಡಿಯುವ ನೀರಿನ ಬಾವಿ, ಮಕ್ಕಳ ಆಟದ ಪಾರ್ಕ್‍ಗಳನ್ನು ನಿರ್ಮಾಣ ಮಾಡುವುದಾಗಿ ಕ್ರಿಯಾಯೋಜನೆಯಲ್ಲಿ ತಿಳಿಸಲಾಗಿತ್ತು. ಆದರೆ ಇದನ್ನು ಪೂರ್ಣಗೊಳಿಸಲಿಲಿ

ಪ್ರತಿಭಟನೆ ಎಚ್ಚರಿಕೆ: ಗ್ರಾಮ ಪಂಚಾಯಿತಿ ಅಧ್ಯಕ್ಷರಿಲ್ಲದಿದ್ದರೂ, ಅವರ ಹೆಸರನ್ನು ಉದ್ಘಾಟನೆ ಫಲಕದಲ್ಲಿ ನಮೂದಿಸಿ ಹೆಸರಿಗೂ ಕಳಂಕ ತರುವ ಕೆಲಸ ನಡೆಸಲಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಕಂಪೆನಿ ಮುಂದೆ ಗ್ರಾಮ ಪಂಚಾಯಿತಿನಿಂದ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. 

ಕೆರೆ ಕೆಳ ಭಾಗದಲ್ಲಿ ನೂರಾರು ಎಕರೆ ಕೃಷಿಭೂಮಿಯಿದ್ದು, ಅವೈಜ್ಞಾನಿಕ ಕಾಮಗಾರಿಯಿಂದ ಕೃಷಿ ಜಮೀನುಗಳಿಗೆ ಮಣ್ಣು ತುಂಬಿ ಸಮಸ್ಯೆಗಳಾಗುತ್ತಿದೆ. ಈ ಪ್ರದೇಶದಲ್ಲಿನ ಪ್ರಮುಖ ಸಂಪರ್ಕ ರಸ್ತೆಗಳೂ ಮಳೆಗಾಲದಲ್ಲಿ ಕೆಸರು ತುಂಬಿ ಸಂಚಾರಕ್ಕೆ ಅಯೋಗ್ಯವಾಗಿದೆ ಎಂದು ಪ್ರಗತಿಪರ ಕೃಷಿಕ ನಿತಿನ್ ಶೆಟ್ಟಿ ಬಾಳ್ಕಟ್ಟ ದೂರಿದರು.

1.5 ಕೋಟಿ. ಪಂಚಾಯಿತಿ ಪ್ರಸ್ತಾವನೆಯನ್ನು ಗ್ರಾಮ ಪಂಚಾಯಿತಿ ಮೂರು ವರ್ಷಗಳ ಹಿಂದ ನೀಡಿತ್ತು. ಅದರಂತೆ ಸಿಎಸ್‍ಆರ್ ಯೋಜನೆಯಡಿ ಕಾಮಗಾರಿ ಪೂರ್ಣಗೊಂಡಿದೆ. ಕಾಮಗಾರಿಯಲ್ಲಿ ಲೋಪದೋಷಗಳಿವೆ ಎಂದು ಈಗಾಗಲೇ ಗ್ರಾಮ ಪಂಚಾಯಿತಿ ಗಮನಕ್ಕೆ ತಂದಿದೆ. 

ಇತ್ತೀಚೆಗೆ ನಡೆದ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿಯೂ ಸಮಸ್ಯೆಯ ಗಂಭೀರತೆ ಬಗ್ಗೆ ವಿವರಿಸಲಾಗಿತ್ತು. ಸ್ಥಳ ಪರಿಶೀಲನೆ ನಡೆಸುವುದಾಗಿ ತಿಳಿಸಿ, ಕೊನೆಗಳಿಗೆಯಲ್ಲಿ ಅದನ್ನು ರದ್ದುಗೊಳಿಸಿದ್ದಾರೆ. ಕಳೆದ ವಾರ ಮತ್ತೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಪತ್ರ ನೀಡಿದರೂ ಸಮಸ್ಯೆಯ ಗಂಭೀರತೆಯನ್ನು ಗಣನೆಗೆ ತೆಗೆದುಕೊಂಡಂತಿಲ್ಲ. ಕೆರೆ ಅಭಿವೃದ್ಧಿಗೆ ಹಣ ವ್ಯಯಿಸಿ ಗ್ರಾಮಕ್ಕೆ ನಷ್ಟವಾಗಿದ್ದು, ಅ ಅನುದಾನವನ್ನು ಗ್ರಾಮದ ಜನೋಪಯೋಗಿ ಕಾರ್ಯಕ್ಕೆ ಬಳಸಬೇಕು ಎಂದು ಮುದರಂಗಡಿ ಗ್ರಾಮ ಪಂಚಾಯಿತಿ ಪ್ರಭಾರ ಅಧ್ಯಕ್ಷ. ಶರತ್ ಶೆಟ್ಟಿ ಸಾಂತೂರು ಹೇಳಿದರು. 

ಗ್ರಾಮ ಪಂಚಾಯಿತಿ ಸದಸ್ಯರಾದ ಶಿವರಾಮ ಭಂಡಾರಿ, ರವೀಂದ್ರ ಪ್ರಭು ಸಾಂತೂರು, ಸಂತೋಷ್ ಶೆಟ್ಟಿ, ಸಮುಂತ್ ಶೆಟ್ಟಿ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News