×
Ad

ಮರು ಮೌಲ್ಯಮಾಪನ; ಎಸೆಸೆಲ್ಸಿಯಲ್ಲಿ ಮಹಮ್ಮದ್‌ ಇಸ್ಮಾಯಿಲ್‌ ಫಝಲ್‌ಗೆ 601 ಅಂಕ

Update: 2022-05-24 10:56 IST
ಮಹಮ್ಮದ್‌ ಇಸ್ಮಾಯಿಲ್‌ ಫಝಲ್‌

ಮಂಗಳೂರು : ಅಲ್‌ ಫಲಾಹ್‌ ಆಂಗ್ಲ ಮಾಧ್ಯಮ ಶಾಲೆ ಕೆಸಿ ನಗರ ತಲಪಾಡಿ ಇಲ್ಲಿನ ವಿದ್ಯಾರ್ಥಿ ಮಹಮ್ಮದ್‌ ಇಸ್ಮಾಯಿಲ್‌ ಫಝಲ್‌ ಅವರು ಎಸೆಸೆಲ್ಸಿ ಪರೀಕ್ಷೆಯ ಮರು ಮೌಲ್ಯಮಾಪನದಿಂದ  601 ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಈ ಹಿಂದೆ 595 ಅಂಕ ಪಡೆದಿದ್ದ ಮಹಮ್ಮದ್‌ ಇಸ್ಮಾಯಿಲ್‌ ಫಝಲ್‌ ಮರು ಮೌಲ್ಯಮಾಪನದಿಂದ ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ತಲಾ 3 ಅಂಕ ಹೆಚ್ಚು ಪಡೆದಿದ್ದಾರೆ. 

ಫಝಲ್‌ ಅವರು ಅಲ್‌ ಫಲಾಹ್‌ ಆಂಗ್ಲ ಮಾಧ್ಯಮ ಹೈಸ್ಕೂಲ್‌ ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. 

ಮಹಮ್ಮದ್‌ ಇಸ್ಮಾಯಿಲ್‌ ಫಝಲ್‌ ಅವರು ಕಿನ್ಯಾ ಕುತುಬಿ ನಗರ ನಿವಾಸಿ ಅಬ್ದುಲ್‌ ಲತೀಫ್‌ ಮತ್ತು ಫಾತಿಮತ್‌ ರಿಝ್ವಾನ ದಂಪತಿಯ ಪುತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News