ಔಟ್ ತೀರ್ಪು ನೀಡುವ ವಿಚಾರದಲ್ಲಿ ಅಂಪೈರ್ ಗೊಂದಲ: ಕ್ರೀಸ್ ಬಿಟ್ಟು ತೆರಳಿದ ಯಶಸ್ವಿ ಜೈಸ್ವಾಲ್

Update: 2022-05-25 05:23 GMT

ಕೋಲ್ಕತಾ: ರಾಜಸ್ಥಾನ ರಾಯಲ್ಸ್ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್  ಅಂಪೈರ್ ಔಟ್ ತೀರ್ಪು ನೀಡುವ ವಿಚಾರದಲ್ಲಿ ಗೊಂದಲದಲ್ಲಿದ್ದಾಗ ಕ್ರೀಸ್ ಬಿಟ್ಟು ಹೊರ ನಡೆದಿರುವ ಘಟನೆ ಗುಜರಾತ್ ಟೈಟಾನ್ಸ್‌ ವಿರುದ್ಧ  ಐಪಿಎಲ್ 2022 ರ ಕ್ವಾಲಿಫೈಯರ್ 1  ಪಂದ್ಯದಲ್ಲಿ ಮಂಗಳವಾರ ನಡೆದಿದೆ.

 ಗುಜರಾತ್ ಟೈಟಾನ್ಸ್‌ ವಿರುದ್ಧ  ರಾಜಸ್ಥಾನ ರಾಯಲ್ಸ್ ನಿಧಾನಗತಿಯ ಆರಂಭವನ್ನು ಪಡೆದುಕೊಂಡಿತು.  ಎಡಗೈ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಪವರ್‌ಪ್ಲೇನಲ್ಲಿ 8 ಎಸೆತಗಳನ್ನು ಎದುರಿಸಿ ಕೇವಲ 3 ರನ್ ಗಳಿಸಿ ಆಫ್ ಸ್ಟಂಪ್‌ನ ಹೊರಗೆ ಕಳಪೆ ಹೊಡೆತಕ್ಕೆ ಕೈಹಾಕಿ ಕೈಸುಟ್ಟುಕೊಂಡರು.  ಎಡಗೈ ಆಟಗಾರ ಜೈಸ್ವಾಲ್  ಅವರು ಯಶ್ ದಯಾಳ್  ವಿರುದ್ಧ ಅಪ್‌ನಲ್ಲಿ ಡ್ರೈವ್ ಆಡಲು ಪ್ರಯತ್ನಿಸಿದರು. ಆದರೆ ಚೆಂಡನ್ನು ಸಂಪೂರ್ಣವಾಗಿ ತಪ್ಪಿಸಿಕೊಂಡರು.

ವೃದ್ಧಿಮಾನ್ ಸಹಾ ಚೆಂಡನ್ನು ಸ್ಟಂಪ್ ಹಿಂದೆ  ಕ್ಯಾಚ್ ಪಡೆಯುತ್ತಿದ್ದಂತೆ ಗುಜರಾತ್ ಟೈಟಾನ್ಸ್ ಆಟಗಾರರು ಏಕಾಏಕಿ ಮನವಿ ಮಾಡಿದರು. ಆದರೆ ಆನ್-ಫೀಲ್ಡ್ ಅಂಪೈರ್ ಬ್ರೂಸ್ ಆಕ್ಸೆನ್‌ಫೋರ್ಡ್ ಅವರಿಗೆ ಗುಜರಾತ್ ಮನವಿಯ ಬಗ್ಗೆ ಮನವರಿಕೆಯಾಗಲಿಲ್ಲ. ಅಂಪೈರ್ ನಿರ್ಧಾರ ತೆಗೆದುಕೊಳ್ಳಲು ಸಮಯ ತೆಗೆದುಕೊಂಡಿದ್ದರಿಂದ ಬೌಲರ್  ಯಶ್ ದಯಾಳ್ ಆಶ್ಚರ್ಯದಿಂದ  ಅವರನ್ನೇ ನೋಡಿದರು.

ಅದೇ ಸಮಯದಲ್ಲಿ ಬ್ಯಾಟರ್ ಯಶಸ್ವಿ ಜೈಸ್ವಾಲ್  ಅವರು ಅಂಪೈರ್ ನಿರ್ಧಾರಕ್ಕೆ ಬರುವ ಮೊದಲೇ ಕ್ರೀಸ್ ಬಿಟ್ಟು ತೆರಳಿದರು. ಕ್ಯಾಮೆರಾಗಳು ಅಂಪೈರ್ ಆಕ್ಸೆನ್‌ಫೋರ್ಡ್ ಮೇಲೆ ಕೇಂದ್ರೀಕರಿಸಿದಾಗ ಅವರು ತಲೆ ಅಲ್ಲಾಡಿಸಿದರು ಹಾಗೂ  ಇಷ್ಟವಿಲ್ಲದೆ ತನ್ನ ಬೆರಳನ್ನು ಮೇಲಕ್ಕೆತ್ತಿದರು.

ಆಕ್ಸೆನ್‌ಫೋರ್ಡ್‌ ಅವರು ಜೈಸ್ವಾಲ್ ಚೆಂಡನ್ನು ಎಡ್ಜ್ ಮಾಡಿದ್ದಾರೆಯೇ ಅಥವಾ ಇಲ್ಲವೇ ಎಂದು ಖಚಿತವಾಗದೆ ಗೊಂದಲದಲ್ಲಿದ್ದಂತೆ ಕಂಡುಬಂದರು. ಆದರೆ ಬ್ಯಾಟರ್ ಜೈಸ್ವಾಲ್ ಕ್ರೀಸ್ ಬಿಟ್ಟು ನಡೆದ  ನಿರ್ಧಾರವು ಅಂಪೈರ್‌ಗೆ ವಿಷಯವನ್ನು ಸುಲಭಗೊಳಿಸಿತು.

ಈ ವರ್ಷದದ ಅಂಪೈರಿಂಗ್ ಮಾನದಂಡಗಳು ಉತ್ತಮವಾಗಿಲ್ಲ ಹಾಗೂ ಅಂಪೈರ್ ತೀರ್ಪು ಪರಾಮರ್ಶೆ ನಿಯಮ(ಡಿಆರ್ ಎಸ್)  ಹಲವಾರು ಸಂದರ್ಭಗಳಲ್ಲಿ ತಂಡಗಳ ರಕ್ಷಣೆಗೆ ಬಂದಿದೆ.

ಡೆಲ್ಲಿ ಕ್ಯಾಪಿಟಲ್ಸ್  ತಂಡ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ನಿರ್ಣಾಯಕ ಹಂತದಲ್ಲಿ ಟಿಮ್ ಡೇವಿಡ್ ಅವರ ವಿಚಾರದಲ್ಲಿ  ಅಂಪೈರ್  ಬ್ಯಾಟರ್ ಗೆ  ಔಟ್ ನೀಡಲಿಲ್ಲ ಹಾಗೂ ಡೆಲ್ಲಿ  ನಾಯಕ ರಿಷಬ್ ಪಂತ್ ಡಿಆರ್ ಎಸ್  ಅನ್ನು ಬಳಸಲು ವಿಫಲರಾದರು.

ಈ ನಿರ್ಧಾರವು ಅಂತಿಮವಾಗಿ ಡೆಲ್ಲಿ ಗೆ ಪ್ಲೇಆಫ್‌ನಲ್ಲಿ ಸ್ಥಾನ ಕೈತಪ್ಪಲು ಕಾರಣವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News