ಮೇ 29ರಂದು ಮಂಗಳೂರಿನಲ್ಲಿ ಸೌಹಾರ್ದ ಸಮ್ಮಿಲನ

Update: 2022-05-26 16:59 GMT

ಮಂಗಳೂರು, ಮೇ ೨೬: ಸಾಮರಸ್ಯ ಮಂಗಳೂರು ವತಿಯಿಂದ ಮೇ ೨೯ರಂದು ಸಂಜೆ ೩ ಗಂಟೆಗೆ ನಗರದ ಬಂಟ್ಸ್ ಹಾಸ್ಟೆಲ್‌ನಲ್ಲಿರುವ ಸಿ.ವಿ. ನಾಯಕ್ ಹಾಲ್‌ನಲ್ಲಿ ಸೌಹಾರ್ದ ಸಮ್ಮಿಲನ ಕಾರ್ಯಕ್ರಮ ಆಯೋಜಿಸಲಾಗಿದೆ.

ದೇಶದ ಏಕತೆ ಮತ್ತು ಸಮಗ್ರತೆ ಉಳಿಯಬೇಕಾದರೆ ಸೌಹಾರ್ದತೆ, ಸಾಮರಸ್ಯ, ಸಹಬಾಳ್ವೆಯನ್ನು ಕಾಯ್ದುಕೊಳ್ಳಬೇಕಾಗಿದೆ. ದ.ಕನ್ನಡ ಜಿಲ್ಲೆಯಲ್ಲಿ ಸಾಮರಸ್ಯ ಸಹಬಾಳ್ವೆಯ ಸಂದೇಶ ಸಾರುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಾಮರಸ್ಯ ಸಂಘಟನೆಯ ಅಧ್ಯಕ್ಷೆ ಮಂಜುಳಾ ನಾಯಕ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹುಬ್ಬಳ್ಳಿ ವಿರಕ್ತಮಠದ ಶ್ರೀ ಗುರುಪಾದೇಶ್ವರ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಉದ್ಘಾಟಿಸುವರು. ಮಂಗಳೂರು ರಾಮಕೃಷ್ಣ ಮಠದ ಶ್ರೀ ಏಕಗಮ್ಯಾನಂದ ಸ್ವಾಮೀಜಿ, ದೇರೆಬೈಲ್ ಚರ್ಚ್ ಧರ್ಮಗುರು ಫಾ.ಜೋಸೆಫ್ ಮಾರ್ಟಿಸ್, ಮಹಮ್ಮದ್ ಕುಂಞಿ, ಉಡುಪಿ ಸಹಬಾಳ್ವೆ ಅಧ್ಯಕ್ಷ ಅಮೃತ್ ಶೆಣೈ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದವರು ವಿವರಿಸಿದರು.

ಸಾಮರಸ್ಯ ಸಂಘಟನೆಯ ಕೋಶಾಧಿಕಾರಿ ಪ್ರಕಾಶ್ ಬಿ. ಸಾಲಿಯಾನ್, ಸಂಚಾಲಕರುಗಳಾದ ಮೊಹಮ್ಮದ್ ಕುಂಜತ್ತಬೈಲ್, ಸಂತೋಷ್ ಕಾಮತ್, ಜೆರಾಲ್ಡ್ ಟವರ್ಸ್ ಸುದ್ದಿಗೋಷ್ಠಿಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News