ಗುಜರಾತ್: ದಲಿತರ ವಿವಾಹ ಮೆರವಣಿಗೆ ಮೇಲೆ ದಾಳಿ
Update: 2022-05-26 23:09 IST
ಅಹ್ಮದಾಬಾದ್, ಮೇ 26: ದಲಿತ ಮಹಿಳೆಯ ವಿವಾಹ ಮೆರವಣಿಗೆ ಮೇಲೆ ಮೇಲ್ಜಾತಿ (ಠಾಕೂರ್)ಯ ಹಲವರು ದಾಳಿ ನಡೆಸಿದ್ದಾರೆ ಎನ್ನಲಾದ ಘಟನೆ ಗುಜರಾತ್‌ನ ಅಹ್ಮದಾಬಾದ್‌ನ ದಂಗಾರ್ವ ಗ್ರಾಮದಲ್ಲಿ ಗುರುವಾರ ನಡೆದಿದೆ. ಇದರಿಂದ ನಾಲ್ವರು ಗಾಯಗೊಂಡಿದ್ದಾರೆ.
ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರು ದಂಗಾರ್ವ ಗ್ರಾಮಕ್ಕೆ ತೆರಳಿದ್ದಾರೆ ಹಾಗೂ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ವಿವಾಹ ಪೂರ್ಣಗೊಂಡ ಬಳಿಕ ಎಫ್‌ಐಆರ್ ದಾಖಲಿಸಲು ವಧುವಿನ ಕುಟುಂಬ ನಿರ್ದರಿಸಿದೆ.
ತಾರಾ ಜಗದೀಶ್ ಪರ್ಮಾರ್ ಹಾಗೂ ರಾಹುಲ್ ಹರೀಶ್ ಪರ್ಮಾರ್ ಅವರ ವಿವಾಹವನ್ನು ಗುರುವಾರ ಅಪರಾಹ್ನ ನಿಗದಿಪಡಿಸಲಾಗಿತು.