ಕೋಲ್ಕತ್ತ: ಇನ್ನೋರ್ವ ಮಾಡೆಲ್ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆ

Update: 2022-05-27 14:36 GMT

ಕೋಲ್ಕತಾ,ಮೇ 27: ಕೋಲ್ಕತಾದ ಇನ್ನೋರ್ವ ರೂಪದರ್ಶಿಯ ಶವ ಪಟುಲಿಯಲ್ಲಿನ ನಿವಾಸದಲ್ಲಿಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಶುಕ್ರವಾರ ಪತ್ತೆಯಾಗಿದೆ. ಇದು ಮೂರು ದಿನಗಳಲ್ಲಿ ಇಂತಹ ಎರಡನೇ ಘಟನೆಯಾಗಿದೆ.

ಎರಡು ದಿನಗಳ ಹಿಂದೆ ಸ್ನೇಹಿತೆ ಮತ್ತು ಸಹೋದ್ಯೋಗಿ ರೂಪದರ್ಶಿ ಬಿದಿಷಾ ಡೆ ಮಜುಮ್ದಾರ್ ಆತ್ಮಹತ್ಯೆ ಬಳಿಕ ತನ್ನ ಪುತ್ರಿ ತೀವ್ರ ಖಿನ್ನತೆಯಿಂದ ಬಳಲುತ್ತಿದ್ದಳು ಮತ್ತು ಆಕೆಯ ಬಗ್ಗೆಯೇ ಮಾತನಾಡುತ್ತಿದ್ದಳು ಎಂದು ಮೃತ ಮಂಜುಷಾ ನಿಯೋಗಿಯ ತಾಯಿ ಹೇಳಿದ್ದಾರೆ. 

ವಧುವಿನ ಮೇಕಪ್ ಫೋಟೊ ಶೂಟ್‌ಗಳ ಮೂಲಕ ಜನಪ್ರಿಯರಾಗಿದ್ದ ಬಿದಿಷಾ ಬುಧವಾರ ಸಂಜೆ ಡಂ ಡಂ ಪ್ರದೇಶದಲ್ಲಿಯ ತನ್ನ ಬಾಡಿಗೆಯ ಫ್ಲಾಟ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
15 ದಿನಗಳ ಹಿಂದಷ್ಟೇ ಜನಪ್ರಿಯ ಟಿವಿ ನಟಿ ಪಲ್ಲವಿ ಡೇ ಇಲ್ಲಿಯ ಗರ್ಫಾ ಪ್ರದೇಶದಲ್ಲಿಯ ತನ್ನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News