ನೆಹರು 58ನೇ ಪುಣ್ಯತಿಥಿ: ರಾಹುಲ್ ಗಾಂಧಿ, ಸೋನಿಯಾ, ಮೋದಿ ಸೇರಿದಂತೆ ಹಲವರ ನಮನ

Update: 2022-05-27 14:40 GMT
ಜವಾಹರಲಾಲ್ ನೆಹರು (Photo: PTI)

ಹೊಸದಿಲ್ಲಿ,ಮೇ 27: ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ 58ನೇ ಪುಣ್ಯತಿಥಿಯಾದ ಶುಕ್ರವಾರ ಪ್ರಧಾನಿ ಮೋದಿ, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಸೇರಿದಂತೆ ಹಲವಾರು ಗಣ್ಯರು ದಿವಂಗತ ನಾಯಕನಿಗೆ ನಮನಗಳನ್ನು ಸಲ್ಲಿಸಿದ್ದಾರೆ.

ನೆಹರು ಅವರನ್ನು ‘ಭಾರತದ ಅಮರ ಪುತ್ರ’ ಎಂದು ಬಣ್ಣಿಸಿರುವ ರಾಹುಲ್,ನೆಹರು ನಿಧನರಾಗಿ 58 ವರ್ಷಗಳು ಕಳೆದಿವೆ. ದೇಶಕ್ಕಾಗಿ ಅವರ ವಿಚಾರಗಳು,ರಾಜಕೀಯ ಮತ್ತು ದೂರದೃಷ್ಟಿ ಈಗ ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿವೆ ಎಂದು ಟ್ವೀಟಿಸಿದ್ದಾರೆ.

ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ನೆಹರು ಅವರಿಗೆ ಗೌರವಗಳನ್ನು ಸಲ್ಲಿಸಿರುವ ಕಾಂಗ್ರೆಸ್,ಅವರು ಧೀರ ಸ್ವಾತಂತ್ರ ಹೋರಾಟಗಾರ, ಆಧುನಿಕ ಭಾರತದ ವಾಸ್ತುಶಿಲ್ಪಿ,ಮುತ್ಸದ್ದಿ,ದೇಶಭಕ್ತ ಮತ್ತು ದೂರದೃಷ್ಟಿಯನ್ನು ಹೊಂದಿದ್ದ ನಾಯಕನಾಗಿದ್ದರು. ಅವರು ಭಾರತ ಮಾತೆಯ ನಿಜವಾದ ಪುತ್ರನಾಗಿದ್ದರು ಎಂದು ಹೇಳಿದೆ.

ಈ ನಡುವೆ ಪ್ರಧಾನಿ ನರೇಂದ್ರ ಮೋದಿಯವರು,ಪಂಡಿತ ಜವಾಹರಲಾಲ್ ನೆಹರುಜಿಯವರಿಗೆ ಅವರ ಪುಣ್ಯತಿಥಿಯಂದು ನಮನಗಳು ಎಂದು ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News