ಕೋಮು ಸಂಘರ್ಷವೇ ತಾಂಬೂಲ ಪ್ರಶ್ನೆಯ ಉದ್ದೇಶ: ಸಿಪಿಐ ದ.ಕ.ಜಿಲ್ಲಾ ಸಮಿತಿ ಆರೋಪ

Update: 2022-05-28 12:54 GMT

ಮಂಗಳೂರು, ಮೇ.28: ದ.ಕ.ಜಿಲ್ಲೆಯ ಮಳಲಿಯಲ್ಲಿ ನಡೆಸಿದ ತಾಂಬೂಲ ಪ್ರಶ್ನೆಯ ಉದ್ದೇಶವು ಸೌಹಾರ್ದವನ್ನು ಕದಡಿ ಜನರನ್ನು ಹಿಂದೂ-ಮುಸ್ಲಿಂ ಎಂದು ಬೇರ್ಪಡಿಸಿ ಕೋಮು ಸಂಘರ್ಷವನ್ನು ಹುಟ್ಟು ಹಾಕಿ ನಿರಂತರ ಅಧಿಕಾರವನ್ನು ಉಳಿಸುವ ಉದ್ದೇಶವಾಗಿದೆ ಎಂದು ಸಿಪಿಐ ದ.ಕ.ಮತ್ತು ಉಡುಪಿ ಜಿಲ್ಲಾ ಸಮಿತಿಯು ಆರೋಪಿಸಿದೆ.

ಅಯೋಧ್ಯೆಯ ವಾದವನ್ನು ಮುಂದಿಟ್ಟುಕೊಂಡು ಹಿಂದುಳಿದ ವರ್ಗದ ಜನರನ್ನು ಛೂಬಿಟ್ಟು ಕೋಮು ಸಂಘರ್ಷಗಳನ್ನು ನಡೆಸಿ ಸಾಮಾಜಿಕ ಸಾಮರಸ್ಯವನ್ನು ಕೆಡಿಸಿ ಅಧಿಕಾರವನ್ನು ಕಬಳಿಸಿ ಸ್ವಾರ್ಥವನ್ನು ಸಾಧಿಸುತ್ತಿರುವುದು ವಾಸ್ತವ ವಿಚಾರವಾಗಿದೆ. ಹಾಗಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೇಶವ ಕೃಪಾದಿಂದ ಬಂದ ಈ ತಾಂಬೂಲವನ್ನು ಜನರು ಪರಿಗಣಿಸದೆ ನ್ಯಾಯಾಲಯದ ಆದೇಶವನ್ನು ಪಾಲಿಸಬೇಕು. ಸಮಾಜಘಾತಕರ ಷಡ್ಯಂತ್ರವನ್ನು ತಿರಸ್ಕರಿಸಿ ಕೋಮು ಸೌಹಾರ್ದವನ್ನು ಕಾಪಾಡಬೇಕೆಂದು ಸಿಪಿಐ ದ.ಕ ಮತ್ತು ಉಡುಪಿ ಜಿಲ್ಲಾ ಸಮಿತಿಯ ಕಾರ್ಯದರ್ಶಿ ವಿ. ಕುಕ್ಯಾನ್ ಕರೆ ನೀಡಿದ್ದಾರೆ.

ಈ ದೇಶದ ಚರಿತ್ರೆ ಮತ್ತು ಸ್ವಾಭಿಮಾನದ ಬಗ್ಗೆ ಅರಿವಿಲ್ಲದವರನ್ನು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯಲ್ಲಿ ಸೇರಿಸಿ ಎಳೆಯ ಮನಸ್ಸುಗಳಿಗೆ ಕೋಮು, ಜಾತಿಯ ವೈಷಮ್ಯವನ್ನು ತುಂಬಿಸಿ ತನ್ನ ರಾಜಕೀಯ ಸ್ವಾರ್ಥ ಸಾಧಿಸಲು ಹೊರಟಿರುವ ಸರಕಾರ ತನ್ನ ಉದ್ದೇಶವನ್ನು ಕೈ ಬಿಡಬೇಕು. ಶಿಕ್ಷಣ ಸಚಿವರು ಮತ್ತು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷರನ್ನು ಪದಚ್ಯುತಿಗೊಳಿಸಬೇಕು. ಭಗತ್‌ಸಿಂಗ್, ನಾರಾಯಣ ಗುರುಗಳ ವಿಚಾರವನ್ನು ಪಠ್ಯಗಳನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News