×
Ad

ಉಡುಪಿ ಜಿಟಿಟಿಸಿಯಲ್ಲಿ ದಾಖಲಾತಿ ಆರಂಭ

Update: 2022-05-29 19:19 IST

ಉಡುಪಿ : ಕೊಳಲಗಿರಿ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ(ಜಿಟಟಿಸಿ)ದಲ್ಲಿ ೨೦೨೨-೨೩ನೇ ಸಾಲಿನ ಶೈಕ್ಷಣಿಕ ವರ್ಷದ ದಾಖಲಾತಿ ಆರಂಭಗೊಂಡಿದ್ದು, ಆಸಕ್ತ ವಿದ್ಯಾರ್ಥಿಗಳು ಸಂಸ್ಥೆಯನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಿ ಸೇರ್ಪಡೆಗೊಳ್ಳಬಹುದೆಂದು ಕಾಲೇಜಿನ ಪ್ರಭಾರ ಪ್ರಾಂಶುಪಾಲ ಮಂಜುನಾಥ್ ನಾಯಕ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಒಟ್ಟು ೨೮ ಕೇಂದ್ರ ಗಳನ್ನು ಸ್ಥಾಪಿಸಿದ್ದು, ಜಿಟಿಟಿಸಿಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಶೇ.೧೦೦ ರಷ್ಟು ಉದ್ಯೋಗವಕಾಶವನ್ನು ಪಡೆಯುತ್ತಾರೆ. ದೂರದ ಊರಿನ ವಿದ್ಯಾರ್ಥಿಗಳಿಗೆ ಹಾಸ್ಟೇಲ್ ಸೌಲಭ್ಯವಿದ್ದು, ನಿಲಯಕ್ಕೆ ಯಾವುದೇ ಬಾಡಿಗೆ ಇರುವುದಿಲ್ಲ. ಕ್ಯಾಂಟಿನ್ ಸಹಿತ ಸಾಕಷ್ಟು ಮೂಲಭೂತ ಸವಲತ್ತುಗಳನ್ನು ಒದಗಿಸಲಾಗಿದೆ ಎಂದರು.

ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆವುಳ್ಳ ಮಕ್ಕಳಿಗೆ ಸಂಸ್ಥೆಯಲ್ಲಿ ಡಿಪ್ಲೋಮಾ ಇನ್ ಟೂಲ್ ಆ್ಯಂಡ್ ಡೈ ಮೇಕಿಂಗ್, ಡಿಪ್ಲೋಮಾ ಇನ್ ಮೆಕೆಟ್ರಾನಿಕ್ಸ್ ಕೋರ್ಸ್ ಗಳಿಗೆ ೩+೧ ವರ್ಷಗಳ ಅವಧಿ ನಿಗದಿಗೊಳಿಸಲಾಗಿದೆ. ೨ ವಿಭಾಗ ದಲ್ಲಿ ಒಟ್ಟು ೧೨೦ ಅಭ್ಯರ್ಥಿಗಳಿಗೆ ಅವಕಾಶವಿದೆ. ಒಂದು ವರ್ಷದ ಕೈಗಾರಿಕಾ ತರಬೇತಿ ಯನ್ನು ಪ್ರತಿಷ್ಠಿತ ವಿವಿಧ ಕೈಗಾರಿಕೆಗಳಲ್ಲಿ ನೀಡಲಾಗುವುದು. ಈ ಸಮಯದಲ್ಲಿ ಮಾಸಿಕ ೧೨ ರಿಂದ ೧೪ ಸಾವಿರ ರೂ. ತರಬೇತಿ ಭತ್ಯೆ ನೀಡಲಾಗುವುದೆಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಉಪನ್ಯಾಸಕ ಎಂ.ಸುದರ್ಶನ್, ಲ್ಯಾಬ್‌ನ ಪ್ರಮುಖ ಆಗಸ್ಟಿನ್ ಜೋನ್ಸನ್ ಸೋನ್ಸಾ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News