ತಂಬಾಕು ನಿಯಂತ್ರಣ:ಡಬ್ಲುಎಚ್ಒ ಪ್ರಶಸ್ತಿಗೆ ಜಾರ್ಖಂಡ್ ಆಯ್ಕೆ
Update: 2022-05-29 21:46 IST
ಧನಬಾದ್,ಮೇ 29: ತಂಬಾಕು ಸೇವನೆಯನ್ನು ನಿಯಂತ್ರಿಸುವಲ್ಲಿ ಜಾರ್ಖಂಡ್ ನ ಪ್ರಯತ್ನಗಳನ್ನು ಗುರುತಿಸಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್ಒ)ಯು ಅದನ್ನು ವಿಶ್ವ ತಂಬಾಕುರಹಿತ ದಿನ ಪ್ರಶಸ್ತಿ-2022ಕ್ಕೆ ಆಯ್ಕೆ ಮಾಡಿದೆ.ಮೇ 31ರಂದು ದಿಲ್ಲಿಯಲ್ಲಿ ವಿಶ್ವ ತಂಬಾಕುರಹಿತ ದಿನ ಕಾರ್ಯಕ್ರಮದಲ್ಲಿ ರಾಜ್ಯ ಆರೋಗ್ಯ ಇಲಾಖೆಯ ತಂಬಾಕು ನಿಯಂತ್ರಣ ಘಟಕವು ಪ್ರಶಸ್ತಿಯನ್ನು ಸ್ವೀಕರಿಸಲಿದೆ ಎಂದು ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಾರ್ಖಂಡ್‌ನ ನೋಡಲ್ ಅಧಿಕಾರಿ ಲಲಿತ ರಂಜನ್ ಪಾಠಕ್ ಅವರು ರವಿವಾರ ಇಲ್ಲಿ ತಿಳಿಸಿದರು.