×
Ad

ಕಾಳು ಮೆಣಸಿನ ಮೂಟೆ ಕಳವು

Update: 2022-05-30 21:57 IST

ಬ್ರಹ್ಮಾವರ, ಮೇ ೩೦: ತಂತ್ರಾಡಿ ಎಂಬಲ್ಲಿ ಮನೆಯಲ್ಲಿಟ್ಟಿದ್ದ ಕಾಳು ಮೆಣಸಿನ ಮೂಟೆಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ಉಡುಪಿಯ ವಿಭುದಪ್ರಿಯ ನಗರ ನಿವಾಸಿ ಸದಾಶಿವ ಮಹಾಬಲೇಶ್ವರ ರಾವ್ ಎಂಬವರು ಕೃಷಿಯಿಂದ ಬಂದ ಉತ್ಪನ್ನವಾದ ೩೨ ಅಡಿಕೆ ಮೂಟೆಗಳನ್ನು ಹಾಗೂ ೧೨ ಕಾಳು ಮೆಣಸಿನ ಮೂಟೆಗಳನ್ನು ಮನೆಯ ರೂಮಿನಲ್ಲಿಟ್ಟಿದ್ದರು. ಮೇ ೨೬ರಿಂದ ಎ.೪ರ ನಡುವಿನ ಅವಧಿಯಲ್ಲಿ ಮನೆಯಲ್ಲಿಟ್ಟಿದ್ದ ೭ ಕಾಳು ಮೆಣಸಿನ ಮೂಟೆಗಳನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಇವುಗಳ ಒಟ್ಟು ಮೌಲ್ಯ ೧,೭೫,೦೦೦ ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News