ಪುತ್ರ ತೇಜಸ್ವಿ ಯಾದವ್‌, ಲಾಲೂ ಪ್ರಸಾದ್‌ ಯಾದವ್‌ ರ ರಾಜಕೀಯ ವಾರಸುದಾರ: ಆರ್‌ಜೆಡಿಯಿಂದ ಅಧಿಕೃತ ಘೋಷಣೆ

Update: 2022-06-01 07:54 GMT
Photo:PTI

ಪಾಟ್ನಾ: ತೇಜಸ್ವಿ ಯಾದವ್ ಅವರು ಆರ್‌ಜೆಡಿ (ರಾಷ್ಟ್ರೀಯ ಜನತಾ ದಳ) ಮುಖ್ಯಸ್ಥ ಲಾಲು ಯಾದವ್ ಅವರ ರಾಜಕೀಯ ವಾರಸುದಾರರಾಗಿದ್ದು, ಪಕ್ಷದ ರಾಷ್ಟ್ರೀಯ ಕಾರ್ಯಸೂಚಿಯನ್ನು ನಿರ್ಧರಿಸಲು ಅವರಿಗೆ ಅಧಿಕಾರ ನೀಡಲಾಗಿದೆ.  ಪಕ್ಷವು ಮಂಗಳವಾರ  ಸಂಜೆ ಇದನ್ನು  ಅಧಿಕೃತಗೊಳಿಸಿದೆ.

ಮಂಗಳವಾರ ಸಂಜೆ ಆರ್ ಜೆಡಿ ನಾಯಕರು ಹಾಗೂ  ಶಾಸಕರು ಅಂಗೀಕರಿಸಿದ ನಿರ್ಣಯದಲ್ಲಿ ತೇಜಸ್ವಿ ಯಾದವ್(32 ವರ್ಷ) ಭವಿಷ್ಯದಲ್ಲಿ ಎಲ್ಲಾ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

ರಾಜ್ಯದಲ್ಲಿ ಜಾತಿವಾರು ಜನಗಣತಿ ಕುರಿತು ಸರ್ವಪಕ್ಷ ಸಭೆ ನಡೆಯಲಿದ್ದು, ಅದಕ್ಕೂ ಮುನ್ನ ಪಕ್ಷ ಕೈಗೊಂಡಿರುವ ಮಹತ್ವದ ನಡೆ ಇದಾಗಿದೆ.

ನಿರ್ಣಯ ಅಂಗೀಕಾರದ ವೇಳೆ  ಬಿಹಾರದ ಮಾಜಿ ಮುಖ್ಯಮಂತ್ರಿಗಳಾದ ಲಾಲು ಯಾದವ್ ಹಾಗೂ  ಅವರ ಪತ್ನಿ ರಾಬರಿ ದೇವಿ, ಅವರ ಪುತ್ರಿ ರಾಜ್ಯಸಭಾ ಸಂಸದೆ ಮಿಸಾ ಭಾರತಿ ಹಾಗೂ  ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಉಪಸ್ಥಿತರಿದ್ದರು.

ಲಾಲು ಯಾದವ್ ಅಧ್ಯಕ್ಷತೆಯಲ್ಲಿ ಆರ್‌ಜೆಡಿ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News