×
Ad

ಅಂತರ್ ಜಿಲ್ಲಾಮಟ್ಟದ ಮುಕ್ತ ರಾಪಿಡ್ ಚೆಸ್ ಪಂದ್ಯಾಟ

Update: 2022-06-01 21:08 IST

ಉಡುಪಿ : ಶ್ರೀನಾರಾಯಣಗುರು ಸ್ಕೂಲ್ ಅಫ್ ಚೆಸ್ ಇದರ ಪ್ರಾರಂಭೋತ್ಸವ ಅಂಗವಾಗಿ ಆಹ್ವಾನಿತ ಅಂತರ್ ಜಿಲ್ಲಾ ಮಟ್ಟದ ಓಪನ್ ರಾಪಿಡ್ ಚೆಸ್ ಟೂರ್ನಮೆಂಟ್ ಉಡುಪಿಯ ಕುಂಜಿಬೆಟ್ಟಿನಲ್ಲಿ ಇತ್ತೀಚೆಗೆ ನಡೆಯಿತು.

ಪಂದ್ಯಾಟವನ್ನು ಲಕ್ಷ್ಮೀನಾರಾಯಣ ಆಚಾರ್ಯ ಉದ್ಘಾಟಿಸಿದರು. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ, ರಾಜೇಶ್ ಶೆಟ್ಟಿ ಹಾಗೂ ಸಾಮ್ರಾಟ್ ಬೆಲ್ಚಡ ಚೆಸ್ ಕಾಯಿನ್ ಮುನ್ನಡೆಸುವ ಮೂಲಕ ಚದುರಂಗ ಸ್ಪರ್ಧೆಗೆ ಚಾಲನೆ ನೀಡಿದರು.

ಅತಿಥಿಗಳಾಗಿ ನಯನ್ ಕುಮಾರ್, ಜಿಲ್ಲಾ ಚೆಸ್ ಅಸೋಶಿಯೇಶನ್ ಅಸೋಸಿಯೇಷನ್ ಉಪಾಧ್ಯಕ್ಷ ಉಮಾ ನಾಥ ಕಾಪು, ರಾಮ ಶೇರಿಗಾರ್ ಉಪಸ್ಥಿತರಿದ್ದರು. ಸೌಂದರ್ಯ ಯು.ಕೆ.ಕಾರ್ಯಕ್ರಮ ನಿರೂಪಿಸಿದರು.  ಸಾಕ್ಷಾತ್ ಯು.ಕೆ. ಸ್ವಾಗತಿಸಿದರು. ಕೀರ್ತನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News