×
Ad

ಮುಖ್ಯಮಂತ್ರಿಯನ್ನು ಆರೋಪಿಯನ್ನಾಗಿ ಮಾಡಿ: ಮೂಸೆವಾಲಾ ಹತ್ಯೆ ಕುರಿತು ಸುಬ್ರಮಣಿಯನ್‌ ಸ್ವಾಮಿ ಟ್ವೀಟ್‌

Update: 2022-06-01 22:51 IST

ಹೊಸದಿಲ್ಲಿ: ‌"ನೀಡಿದ್ದ ಭದ್ರತೆಯನ್ನು ಹಿಂಪಡೆದ ಕಾರಣ ಸಿಧು ಮೂಸೇವಾಲಾ ಹತ್ಯೆಗೀಡಾದರು. ಇದಕ್ಕೆ ಮುಖ್ಯಮಂತ್ರಿಯನ್ನು ಹೊಣೆಯಾಗಿಸಬೇಕು" ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್‌ ಸ್ವಾಮಿ ಹೇಳಿಕೆ ನೀಡಿದ್ದಾರೆ. 

“ಮೂಸೆವಾಲಾ ಅವರ ಭದ್ರತೆಯನ್ನು ಹಿಂತೆಗೆದುಕೊಳ್ಳುವ ಮೂಲಕ ಅವರ ಹತ್ಯೆಯನ್ನು ಸುಗಮಗೊಳಿಸಲಾಯಿತು. 2003 ರಲ್ಲಿ, ಭದ್ರತೆಯನ್ನು ಹಿಂತೆಗೆದುಕೊಳ್ಳುವ ಮೂಲಕ ಹರೇನ್ ಪಾಂಡೆಯ ಹತ್ಯೆಯನ್ನು ಸಹ ಸುಗಮಗೊಳಿಸಲಾಯಿತು. ಇಂತಹ ಕೊಲೆಯ ನಡೆದಾಗ ಆ ಸಂಬಂಧ ರಾಜ್ಯದ ಮುಖ್ಯಮಂತ್ರಿ ಮತ್ತು ಗೃಹ ಮಂತ್ರಿಯನ್ನು ಮೊದಲ ಆರೋಪಿಗಳನ್ನಾಗಿ ಮಾಡಲು ಕಾನೂನು ಅಗತ್ಯವಾಗಬಹುದು.” ಎಂದು ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ಟ್ವೀಟ್‌ ಮಾಡಿದ್ದಾರೆ. 

ಪಂಜಾಬ್‌ನ ಭಗವಂತ್ ಮಾನ್ ಸರ್ಕಾರವು ಸಿಧು ಮೂಸೆವಾಲಾ ಅವರಿಗಿದ್ದ ವಿಐಪಿ ಭದ್ರತೆಯನ್ನು ತೆಗೆದುಹಾಕಿದ ಬಳಿಕ, ಹಾಡಹಗಲೇ ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ಮೂಸೆವಾಲಾ ಕೊಲೆಗೀಡಾಗಿದ್ದರು. ಆಡಳಿತಾರೂಢ ಆಮ್ ಆದ್ಮಿ ಪಕ್ಷವು ರಾಜ್ಯದಲ್ಲಿನ ವಿವಿಐಪಿ ಸಂಸ್ಕೃತಿಯನ್ನು ತನ್ನ ಸರ್ಕಾರವು ನಿಲ್ಲಿಸುತ್ತದ ಎಂದು ಮೂಸೆವಾಲಾ ಅವರ ಭದ್ರತೆಯನ್ನು ಕಡಿತಗೊಳಿಸಿತ್ತು.

 ಆದರೆ, ಸುಬ್ರಮಣಿಯನ್ ಸ್ವಾಮಿ ಅವರು, 2003 ರ ಪ್ರಕರಣವನ್ನು ಅದರಲ್ಲೂ ಹರೇನ್ ಪಾಂಡ್ಯ ಹೆಸರನ್ನು ಉಲ್ಲೇಖಿಸಿರುವುದು ಗಮನಾರ್ಹವಾಗಿದೆ. ಗುಜರಾತ್‌ನ ಮಾಜಿ ಗೃಹ ಸಚಿವ ಹರೇನ್ ಪಾಂಡ್ಯ ಅವರ ಭದ್ರತೆಯನ್ನು ಹಿಂಪಡೆದ ನಂತರ 2003 ರಲ್ಲಿ ಅವರನ್ನು ಹತ್ಯೆ ಮಾಡಲಾಗಿತ್ತು. ಹರೇನ್ ಪಾಂಡ್ಯ ಹತ್ಯೆಯ ಸಂದರ್ಭದಲ್ಲಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದರು, ಮತ್ತು ಅಮಿತ್ ಶಾ ಗೃಹ ಸಚಿವರಾಗಿದ್ದರು. ಇಂತಹ ಪ್ರಕರಣದಲ್ಲಿ ಮುಖ್ಯಮಂತ್ರಿ ಹಾಗೂ ಗೃಹಮಂತ್ರಿಯನ್ನು ಮೊದಲ ಆರೋಪಿಗಳನ್ನಾಗಿ ಮಾಡಬೇಕೆಂದು ಸ್ವಾಮಿ ಹೇಳಿರುವುದು ಈ ಹಿನ್ನೆಲೆಯಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News