2011ರಲ್ಲಿ ಪ್ರಕಟವಾದ ವಿವಾದಿತ ಲೇಖನದ ಕುರಿತು ‘ಕಾಶ್ಮೀರ್ ವಾಲಾ’ ಸಂಪಾದಕ ಯಶ್ರಾಜ್ ಶರ್ಮಾಗೆ ಸಮನ್ಸ್

Update: 2022-06-02 17:01 GMT

ಶ್ರೀನಗರ, ಜೂ.2: 2011ರಲ್ಲಿ ಪ್ರಕಟವಾದ ವಿವಾದಾತ್ಮಕ ಲೇಖನವೊಂದರ ಕುರಿತು ಪ್ರಶ್ನಿಸಲು ಜಮ್ಮುಕಾಶ್ಮೀರ ಪೊಲೀಸರು ಆನ್ಲೈನ್ ಪತ್ರಿಕೆ ‘ಕಾಶ್ಮೀರ್ ವಲ್ಲಾ’ದ ಹಂಗಾಮಿ ಸಂಪಾದಕ ಯಶರಾಜ್ ಶರ್ಮಾ ಅವರಿಗೆ ಸಮನ್ಸ್ ಕಳುಹಿಸಿದ್ದಾರೆ ಎಂದು ದಿ ವೈರ್ ಪತ್ರಿಕೆ ವರದಿ ಮಾಡಿದೆ.

ಗುರುವಾರದೊಳಗೆ ವಿಚಾರಣೆಗೆ ಹಾಜರಾಗುವಂತೆ ಜಮ್ಮುಕಾಶ್ಮೀರದ ತನಿಖಾ ಸಂಸ್ಥೆಯು 23 ವರ್ಷದ ಯಶರಾಜ್ ಶರ್ಮಾ ಅವರಿಗೆ ಸೂಚಿದೆಯೆಂದು ವರದಿ ಹೇಳಿದೆ.

ಪ್ರಸಕ್ತ ಕಾಶ್ಮೀರ್ ವಾಲ್ಲಾದ ಪ್ರಧಾನ ಸಂಪಾದಕರಾದ ಫಾಹದ್ ಶಹಾ ಅವರು , ಪ್ರಚೋದನಕಾರಿ ಹಾಗೂ ದೇಶದ್ರೋಹಕರವಾದಂತಹ ಲೇಖನವೊಂದನ್ನು ಪ್ರಕಟಿಸಿದ ಆರೋಪಕ್ಕೆ ಸಂಬಂಧಿಸಿ ರಾಜ್ಯ ತನಿಖಾ ಏಜೆನ್ಸಿಯ ಕಸ್ಟಡಿಯಲ್ಲಿದ್ದಾರೆ. ಈ ವಿವಾದಾತ್ಮಕ ಲೇಖನವನ್ನು ಎಪ್ರಿಲ್ 17ರಂದು ಬಂಧಿತರಾದ ಜಮ್ಮುಕಾಶ್ಮೀರದ ಸಂಶೋಧನಾ ವಿಧ್ವಾಂಸ ಅಬ್ದುಲ್ ಆಲಾ ಫಾಝಿಲ್ ಬರೆದಿದ್ದರು.

ಫಾಹದ್ ಶಹಾ ಬಂಧನದ ಬಳಿಕ ಕಾಶ್ಮೀರಿ ವಾಲ್ಲಾದ ಸಂಪಾದಕೀಯ ವ್ಯವಹಾರಗಳ ಉಸ್ತುವಾರಿಯನ್ನು ಶರ್ಮಾ ವಹಿಸಿಕೊಂಡಿದ್ದು. 2011ರಲ್ಲಿ ಈ ಲೇಖನ ಪ್ರಕಟಗೊಂಡು, ಫಾಹದ್ ಶಹಾ ಬಂಧನವಾದಾಗ ಶರ್ಮಾ ಅವರಿಗೆ ಕೇವಲ 12 ವರ್ಷ ವಯಸ್ಸಾಗಿತ್ತು. 2018ರಲ್ಲಿ ಅವರು ಈ ಆನ್ಲೈನ್ ಪತ್ರಿಕೆಗೆ ಸೇರ್ಪಡೆಗೊಂಡಿದ್ದರು.

ಅಬ್ದುಲ್ ಆಲಾ ಫಾಝಿಲ್ ಅವರ ‘ಗುಲಾಮಗಿರಿಯ ಸಂಕಲೆಗಳು ಮುರಿಯಲಿವೆ’ ಎಂಬ ಶೀರ್ಷಿಕೆಯ ಲೇಖನವು ಭಯೋತ್ಪಾದನೆಯನ್ನು ವೈಭವೀಕರಿಸಿ ಯುವಜನರನ್ನು ಹಿಂಸಾಚಾರದ ಮಾರ್ಗಕ್ಕೆ ಸೆಳೆಯುವ ದುರುದ್ದೇಶವನ್ನು ಹೊಂದಿದೆೆ’’ ಎಂದು ಪೊಲೀಸರು ಎಪ್ರಿಲ್ನಲ್ಲಿ ನೀಡಿದ ಹೇಳಿಕೆಯಲ್ಲಿ ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News