ಪಿಎಫ್ ಬಡ್ಡಿದರ ಶೇ.8.1ಕ್ಕೆ ನಿಗದಿ: ನಾಲ್ಕು ದಶಕಗಳಲ್ಲಿ ಅತ್ಯಂತ ಕನಿಷ್ಠ
Update: 2022-06-03 23:13 IST
ಹೊಸದಿಲ್ಲಿ,ಜೂ.3: ಸರಕಾರವು 2021-22ನೇ ಸಾಲಿಗೆ ಉದ್ಯೋಗಿಗಳ ಭವಿಷ್ಯನಿಧಿಯ ಮೇಲೆ ಶೇ.8.1ಬಡ್ಡಿದರಕ್ಕೆ ಅನುಮೋದನೆ ನೀಡಿದೆ. ಇದು ಕಳೆದ ನಾಲ್ಕು ದಶಕಗಳಲ್ಲಿಯೇ ಅತ್ಯಂತ ಕನಿಷ್ಠ ಬಡ್ಡಿದರವಾಗಿದೆ. ಸರಕಾರದ ನಿರ್ಧಾರವು ಉದ್ಯೋಗಿಗಳ ಭವಿಷ್ಯನಿಧಿ ಸಂಸ್ಥೆ (ಇಪಿಎಫ್ಒ)ಯ ಐದು ಕೋಟಿ ಚಂದಾದಾರರ ಮೇಲೆ ಪರಿಣಾಮವನ್ನು ಬೀರಲಿದೆ.
2020-21ನೇ ಸಾಲಿಗೆ ಭವಿಷ್ಯನಿಧಿ ಠೇವಣಿಗಳ ಮೇಲೆ ವಾರ್ಷಿಕ ಶೇ.8.5 ಬಡ್ಡಿಯನ್ನು ನೀಡಿದ್ದ ಇಪಿಎಫ್ಒ,2021-22ನೇ ಸಾಲಿಗೆ ಶೇ.8.1 ಬಡ್ಡಿಯನ್ನು ನೀಡಲು ಮಾರ್ಚ್‌ನಲ್ಲಿ ನಿರ್ಧರಿಸಿತ್ತು. ಇದು ಬಡ್ಡಿದರ ಶೇ.8ರಷ್ಟಿದ್ದ 1977-78ರ ನಂತರ ಕನಿಷ್ಠ ಬಡ್ಡಿದರವಾಗಿದೆ.